Russia | ಯುಕ್ರೇನ್ ಮೇಲೆ ಕ್ಷಿಪಣಿ, ಡ್ರೋನ್‌ಗಳ ಮೂಲಕ ಭೀಕರ ದಾಳಿ ಮಾಡಿದ ರಷ್ಯಾ
Russia | ಯುಕ್ರೇನ್ ಮೇಲೆ ರಷ್ಯಾ ಬೃಹತ್ ಡ್ರೋನ್ ಮತ್ತು ಕ್ಷಿಪಣಿ ದಾಳಿ
Published on:
Copied
Follow Us
ಕೈವ್: ಯುಕ್ರೇನ್ ಸಶಸ್ತ್ರ ಪಡೆಗಳ ದಿನವನ್ನು ಆಚರಿಸುತ್ತಿರುವ ರಷ್ಯಾ(Russia) ದಾಳಿ ಮಾಡಿದ್ದು, ದೇಶಾದ್ಯಂತ 51 ಕ್ಷಿಪಣಿಗಳು ಮತ್ತು 653 ಡ್ರೋನ್‌ಗಳ ಮೂಲಕ ರಾತ್ರಿಯಿಡೀ ಬಾರಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಯುಕ್ರೇನ್‌ನ ವಾಯುಪಡೆಯು 585 ಡ್ರೋನ್‌ಗಳು ಮತ್ತು 30 ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಯುಕ್ರೇನ್‌ನ ಆಂತರಿಕ ಸಚಿವ ಇಹೋರ್ ಕ್ಲಿಮೆಂಕೊ, ದೇಶಾದ್ಯಂತ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಕೀವ್ ಪ್ರದೇಶದಲ್ಲಿ, ಸ್ಥಳೀಯ ಅಧಿಕಾರಿಗಳು ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಅಲ್ಲದೆ, ಎಲ್ವಿವ್ ಪ್ರದೇಶದ ಪಶ್ಚಿಮಕ್ಕೆ ಡ್ರೋನ್‌ಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.
ಯುಕ್ರೇನ್‌ನ ರಾಷ್ಟ್ರೀಯ ಇಂಧನ ನಿರ್ವಾಹಕ ಉಕ್ರೆನೆರ್ಗೊ, ಬ್ಯಾರೇಜ್ ದಾಳಿಯು ವಿದ್ಯುತ್ ಕೇಂದ್ರಗಳು ಮತ್ತು ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದೆ. ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದೇಶದ ಗ್ರಿಡ್‌ಗೆ ಹಾನಿ ಮಾಡಲು ರಷ್ಯಾದ ಮತ್ತೊಂದು ಪ್ರಯತ್ನವನ್ನು ಶುರು ಮಾಡಿದೆ.
ರಷ್ಯಾ ಕೂಡ ರಾತ್ರೋರಾತ್ರಿ 116 ಯುಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ, ಯುಕ್ರೇನಿಯನ್ ಪಡೆಗಳು ರಷ್ಯಾದ ರಿಯಾಜಾನ್ ತೈಲ ಸಂಸ್ಕರಣಾಗಾರದ ಮೇಲೆ ದಾಳಿ ಮಾಡಿವೆ ಎಂದು ಉಕ್ರೇನಿಯನ್ ಮಿಲಿಟರಿ ಮತ್ತು ಸ್ಥಳೀಯ ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ. ಅದರೆ ಮಾಸ್ಕೋ ಸಂಸ್ಕರಣಾಗಾರವು ಹಾನಿಗೊಳಗಾಗಿದೆ ಎಂದು ನೇರವಾಗಿ ಒಪ್ಪಿಕೊಂಡಿಲ್ಲ.
ಇತ್ತೀಚಿನ ತಿಂಗಳುಗಳಲ್ಲಿ ಯುಕ್ರೇನ್ ರಷ್ಯಾದ ಸಂಸ್ಕರಣಾಗಾರಗಳ ಮೇಲೆ ದೀರ್ಘ-ಶ್ರೇಣಿಯ ಡ್ರೋನ್ ದಾಳಿಗಳನ್ನು ಹೆಚ್ಚಿಸಿದೆ. ಇದು ಮಾಸ್ಕೋದ ತೈಲ ರಫ್ತು ಆದಾಯವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಸತತ ನಾಲ್ಕನೇ ವರ್ಷವೂ, ಕೀವ್ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾ ಯುಕ್ರೇನ್‌ನ ನೀರು ಮತ್ತು ವಿದ್ಯುತ್ ವ್ಯವಸ್ಥೆಗಳ ಮೇಲೆ ಪದೇಪದೆ ದಾಳಿ ಮಾಡುವ ಮೂಲಕ ಚಳಿಗಾಲವನ್ನು ಶಸ್ತ್ರಸಜ್ಜಿತಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).