ಯುಕ್ರೇನ್​ ಮೇಲೆ ರಷ್ಯಾ ದಾಳಿ; 5 ಜನ ಬಲಿ, 10 ಮಂದಿಗೆ ಗಂಭೀರ ಗಾಯ | Russia attack

Russia attack ಯುಕ್ರೇನ್‌ನ ಜಪೋರಿಝಿಯಾದ ದಾಳಿ ಮಾಡಿದ ರಷ್ಯಾ
Russia attack ಯುಕ್ರೇನ್‌ನ ಜಪೋರಿಝಿಯಾದ ದಾಳಿ ಮಾಡಿದ ರಷ್ಯಾ
Published on
ಕೈವ್​: ರಷ್ಯಾ ಸೇನಾ ಪಡೆಗಳು(Russia attack) ಯುಕ್ರೇನ್‌ನ ನಾಗರಿಕ ಪ್ರದೇಶಗಳ ಮೇಲೆ ಗ್ಲೈಡ್ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಜಪೋರಿಝಿಯಾದ ಐದು ಜನ ಮೃತಪಟ್ಟಿದ್ದಾರೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಇವಾನ್ ಫೆಡೋರೊವ್, ಯುದ್ಧ ಪ್ರಾರಂಭವಾದಾಗಿನಿಂದ ಮೂರನೇ ಬಾರಿಗೆ ಜಪೋರಿಝಿಯಾಗೆ ಅಪ್ಪಳಿಸಿದ ಶಕ್ತಿಶಾಲಿ ಗ್ಲೈಡ್ ಬಾಂಬ್ ಕೆಲವು ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡಗಳನ್ನು ಹಾನಿಗೊಳಿಸಿದೆ. ಅಲ್ಲದೆ, ಸ್ಥಳೀಯ ಮಾರುಕಟ್ಟೆಯನ್ನು ಸಹ ಧ್ವಂಸಗೊಳಿಸಿತು ಎಂದು ಹೇಳಿದ್ದಾರೆ.
ರಷ್ಯಾದ ಜೆಟ್‌ಗಳು ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸಿದಾಗ ಉಡಾಯಿಸಲಾದ ಅಧುನಿಕ ಸೋವಿಯತ್ ಆಯುಧವಾದ ಗ್ಲೈಡ್ ಬಾಂಬ್‌ಗಳ ಶಕ್ತಿಯು ಯುಕ್ರೇನ್‌ನ ಪ್ರಮುಖ ನಗರಗಳನ್ನು ನಾಶಮಾಡಿದೆ. ಇದರ ವಿರುದ್ಧ ಯುಕ್ರೇನ್ ಯಾವುದೇ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ನೀಡಿಲ್ಲ.
ದಕ್ಷಿಣದ ಒಡೆಸಾ ನಗರದ ಮೇಲೆ ರಾತ್ರಿಯ ಸಮಯದಲ್ಲಿ ಡ್ರೋನ್ ದಾಳಿ ನಡೆಸಿದ ರಷ್ಯಾ, 16 ವರ್ಷದ ಬಾಲಕ ಸೇರಿದಂತೆ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ, ದಾಳಿಯಲ್ಲಿ ಅಪಾರ್ಟ್‌ಮೆಂಟ್‌ಗಳ ಮೇಲಿನ ಮಹಡಿಗಳು ಪುಡಿಪುಡಿಯಾಗಿ ಬೆಂಕಿ ಕಾಣಿಸಿಕೊಂಡ ನಂತರವು 13 ಜನರ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಕ್ರೇನ್‌ನ ಪಶ್ಚಿಮ ನಗರವಾದ ಟೆರ್ನೋಪಿಲ್ ಮೇಲೆ ರಷ್ಯಾದ ಡ್ರೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದರು ಮತ್ತು 18 ಮಕ್ಕಳು ಸೇರಿದಂತೆ 94 ಜನರು ಗಾಯಗೊಂಡ ಎರಡು ದಿನಗಳ ನಂತರ ಈ ದಾಳಿಗಳು ನಡೆದಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net