ಶಾಲೆಗಳಲ್ಲಿ ಬುರ್ಖಾ-ನಿಕಾಬ್‌ ನಿಷೇಧಕ್ಕೆ ಪ್ರಸ್ತಾವನೆ: ಪ್ರಧಾನಿ ಮೆಲೋನಿ ವಿರುದ್ಧ ನಾಲಿಗೆ ಹರಿಬಿಟ್ಟ ಎಂಐಎಂ ನಾಯಕ ವಾರಿಸ್ ಪಠಾಣ್ | Waris Pathan

ಇಟಲಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬುರ್ಖಾ ಮತ್ತು ನಿಕಾಬ್‌ನಂತಹ ವಸ್ತುಗಳ ನಿಷೇಧಕ್ಕೆ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಮುಂದಾಗಿದ್ದು, ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಕುರಿತು ಭಾರತದ ಎಂಐಎಂ ನಾಯಕ ವಾರಿಸ್ ಪಠಾಣ್ ಪ್ರತಿಕ್ರಿಯಿಸಿದ್ದು, ಮಹಿಳಾ ಪ್ರಧಾನಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ವಿವಾದಕ್ಕೀಡಾಗಿದೆ.
Waris Pathan
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ವಾರಿಸ್ ಪಠಾನ್
Published on

ಮುಂಬೈ: ಇಟಲಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬುರ್ಖಾ ಮತ್ತು ನಿಕಾಬ್‌ನಂತಹ ವಸ್ತುಗಳ ನಿಷೇಧಕ್ಕೆ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಮುಂದಾಗಿದ್ದು, ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಕುರಿತು ಭಾರತದ ಎಂಐಎಂ ನಾಯಕ ವಾರಿಸ್ ಪಠಾಣ್ ಪ್ರತಿಕ್ರಿಯಿಸಿದ್ದು, ಮಹಿಳಾ ಪ್ರಧಾನಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ವಿವಾದಕ್ಕೀಡಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ವಾರಿಸ್ ಪಠಾನ್, ಶಾಲಾ ಮಕ್ಕಳು ಬುರ್ಖಾ ಮತ್ತು ನಿಕಾಬ್ ಧರಿಸುವುದನ್ನು ವಿರೋಧಿಸುವ ಮೆಲೋನಿ, ಮಹಿಳೆಯರು ಸಾರ್ವಜನಿಕವಾಗಿ ಬ್ರಾ, ಪ್ಯಾಂಟೀಸ್ ಮತ್ತು ಬಿಕಿನಿ ಧರಿಸಬೇಕೆಂಬುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಅಸಭ್ಯಕರ ಹೇಳಿಕೆ ನೀಡಿದ್ದಾರೆ.

Also Read
ಸ್ಟಾಲಿನ್ ಜಾರಿಗೆ ತಂದ ಶಾಲಾ ಮಕ್ಕಳ ಉಪಹಾರ ಯೋಜನೆ ವಿಸ್ತರಣೆ; ಮರುನಾಮಕರಣ ಮಾಡಿ ಚಾಲನೆ ನೀಡಿದ ಸಿಎಂ ವಿಜಯ್ | CM Vijay
Waris Pathan

ಮೆಲೋನಿ ಅವರಿಗೆ ಬುರ್ಖಾ ಮತ್ತು ನಿಕಾಬ್ ಬಗ್ಗೆ ಅಸಹ್ಯವಿದೆ. ಅವರಿಗೆ ಬ್ರಾ ಮತ್ತು ಬಿಕಿನಿಗಳೆಂದರೆ ಇಷ್ಟವಿರಬಹುದು. ಮಹಿಳೆಯರು ಮೈ ಮುಚ್ಚಿಕೊಳ್ಳುವ ಬದಲು ಮೈ ಕಾಣುವಂತಹ ಉಡುಪುಗಳನ್ನು ಧರಿಸುವುದನ್ನೇ ಇಟಲಿಯ ಪ್ರಧಾನಿ ಬಯಸುತ್ತಾರೆನೋ? ಈ ಪ್ರಸ್ತಾವನೆ ನಾಚಿಕೆಗೇಡಿನದ್ದು ಎಂದಿದ್ದಾರೆ.

ಭಾನುವಾರ ತಮ್ಮ ಬ್ರದರ್ಸ್ ಆಫ್ ಇಟಲಿ ಪಕ್ಷದ ಯುವ ಘಟಕದ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ್ದ ಜಾರ್ಜಿಯಾ ಮೆಲೋನಿ, ಶಾಲೆಗಳಲ್ಲಿ ಬುರ್ಖಾ ಮತ್ತು ನಿಕಾಬ್ ಸೇರಿದಂತೆ ಮುಖವನ್ನು ಮುಚ್ಚುವ ಪರದೆಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ನಮ್ಮ ಸರ್ಕಾರ ಸಚಿವ ಸಂಪುಟದ ಮುಂದೆ ಮಂಡಿಸಲಿದೆ ಎಂದು ಹೇಳಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net