ಸ್ಲೋವಾಕಿಯಾದಲ್ಲಿ 'ನಮೋ' ಸಂಚಲನ: ಮೋದಿಗೆ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಪ್ರದಾನ

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಲೋವಾಕಿಯಾ ಅಧ್ಯಕ್ಷ ಪೀಟರ್​ ಪೆಲ್ಲೆಗ್ರಿ
ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಲೋವಾಕಿಯಾ ಅಧ್ಯಕ್ಷ ಪೀಟರ್​ ಪೆಲ್ಲೆಗ್ರಿ
Published on

ಪ್ರಮುಖ ಮುಖ್ಯಾಂಶಗಳು

  • ಸ್ಲೋವಾಕಿಯಾ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಚಲನ
  • 1993ರ ಬಳಿಕ ಇದೇ ಮೊದಲ ಬಾರಿಗೆ ಸ್ಲೋವಾಕಿಯಾಗೆ ಭೇಟಿ
  • ಸ್ಲೋವಾಕಿಯಾದ ಅತ್ಯುನ್ನತ ಗೌರವ ಭಾರತದ ಪ್ರಧಾನಿಯ ಮುಡಿಗೆ
ಬ್ರಾಟಿಸ್ಲಾವಾ: 1993ರ ಬಳಿಕ ಇದೇ ಮೊದಲ ಬಾರಿಗೆ ಸ್ಲೋವಾಕಿಯಾ ದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿಯೂ ಹೊಸ ಸಂಚಲನ ಮೂಡಿಸಿರುವುದು ವಿಶೇಷ.
ಭಾರತ ಮತ್ತು ಸ್ಲೋವಾಕಿಯಾ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಲ್ಲಿ ಸ್ಲೋವಾಕಿಯಾ ರಾಷ್ಟ್ರವು ಇದೀಗ ಭಾರತೀಯ ಪ್ರಧಾನಿಗೆ ತನ್ನ ದೇಶದ ಅತ್ಯುನ್ನತ ರಾಷ್ಟ್ರೀಯ ಗೌರವವಾದ 'ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್, ಫಸ್ಟ್ ಕ್ಲಾಸ್' (Order of the White Double Cross, 1st Class) ಪ್ರಶಸ್ತಿ ನೀಡಿ ಗೌರವಿಸಿದೆ.
ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಸ್ಲೋವಾಕಿಯಾ ಅಧ್ಯಕ್ಷರಾದ ಪೀಟರ್ ಪೆಲ್ಲೆಗ್ರಿನ್, ತಮ್ಮ ರಾಷ್ಟ್ರದ ಅತ್ಯುನ್ನತ ಗೌರವವನ್ನು ಭಾರತದ ಪ್ರಧಾನಿಗೆ ನೀಡುತ್ತಿರುವುದಾಗಿ ಘೋಷಿಸಿದರು. ಇದೇ ಸಮಯದಲ್ಲಿ ಅಲ್ಲಿನ ಅಧ್ಯಕ್ಷರು, ಸರ್ಕಾರ ಮತ್ತು ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ, ಈ ಪ್ರಶಸ್ತಿ 140 ಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.
ಈ ಪ್ರತಿಷ್ಠಿತ ಪ್ರಶಸ್ತಿಯು ಕೇವಲ ನನಗೆ ಮಾತ್ರವಲ್ಲ, ಭಾರತದ 140 ಕೋಟಿ ಜನತೆಗೆ ಸಂದ ಗೌರವವಾಗಿದೆ. ಇದು ಭಾರತ ಮತ್ತು ಸ್ಲೋವಾಕಿಯಾ ರಾಷ್ಟ್ರಗಳ ನಡುವಿನ ದಶಕಗಳ ಸುದೀರ್ಘ ಮತ್ತು ಶಾಶ್ವತ ಸ್ನೇಹಕ್ಕೆ ಸಿಕ್ಕ ಪ್ರತಿಫಲ ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net