ಖಾಸಗಿ ಜೆಟ್​ ಅಪಘಾತ: ಚಾಲಕ ಗ್ರೆಗ್ ಬಿಫಲ್ ಕುಟುಂಬ ಸೇರಿದಂತೆ 7 ಮಂದಿ ಸಜೀವ ದಹನ! | Plane Crash

Plane Crash
Plane Crash
Published on
ಉತ್ತರ ಕೆರೊಲಿನಾ: ಸ್ಟೇಟ್ಸ್‌ವಿಲ್ ರೀಜನಲ್ ಏರ್‌ಪೋರ್ಟ್‌ನಲ್ಲಿ ಸಂಭವಿಸಿದ ಖಾಸಗಿ ಜೆಟ್​ ಅಪಘಾತದಲ್ಲಿ ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್ (ವಯಸ್ಸು 55) ಸೇರಿ ಒಟ್ಟು 7 ಮಂದಿ ಮೃತಪಟ್ಟ ಘಟನೆ ಗುರುವಾರ ಉತ್ತರ ಕೆರೊಲಿನಾದದಲ್ಲಿ ನಡೆದಿದೆ.
ಚಾಲಕ ಗ್ರೆಗ್ ಅವರ ಪತ್ನಿ ಕ್ರಿಸ್ಟಿನಾ, ಮಗಳು ಎಮ್ಮಾ (14 ವರ್ಷ), ಮಗ ರೈಡರ್ (5 ವರ್ಷ), ಹಾಗೂ ಇತರ ಮೂವರಾದ ಕ್ರೇಗ್ ವಾಡ್ಸ್‌ವರ್ತ್, ಡೆನ್ನಿಸ್ ಡಟನ್ ಮತ್ತು ಅವರ ಮಗ ಜ್ಯಾಕ್ ಡಟನ್ ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ.

ಈ ದುರಂತದ ಬಗ್ಗೆ ಮಾಹಿತಿ

ಸೆಸ್ನಾ C550 ಬಿಫಲ್ ಅವರ ಕಂಪನಿಗೆ ಸೇರಿದ ವಿಮಾನವಾಗಿದ್ದು, ಬೆಳಗ್ಗೆ ಸುಮಾರು 10:15ಕ್ಕೆ, ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಕಾರಣ ತಿಳಿದಿಲ್ಲವಾದರೂ ಇನ್ನೂ ತನಿಖೆ ನಡೆಯುತ್ತಿದೆ (FAA ಮತ್ತು NTSB ತನಿಖೆ ಮಾಡುತ್ತಿವೆ). ಮಂಜು ಮತ್ತು ಹವಾಮಾನ ಪರಿಸ್ಥಿತಿಗಳು ಪಾತ್ರ ವಹಿಸಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ.
NASCAR ಸಂಸ್ಥೆ, ಉತ್ತರ ಕೆರೊಲಿನಾ ಗವರ್ನರ್ ಜಾಶ್ ಸ್ಟೈನ್ ಮತ್ತು ಇತರರು ತೀವ್ರ ಸಂತಾಪ ಸೂಚಿಸಿದ್ದಾರೆ. ಬಿಫಲ್ ಅವರು NASCARನ 75 ಶ್ರೇಷ್ಠ ಚಾಲಕರಲ್ಲಿ ಒಬ್ಬರಾಗಿದ್ದು, ಹರಿಕೇನ್ ಹೆಲೀನ್ ಪರಿಹಾರ ಕಾರ್ಯಗಳಲ್ಲಿ ಹೆಲಿಕಾಪ್ಟರ್ ಬಳಸಿ ಸಹಾಯ ಮಾಡಿದ್ದಕ್ಕೆ ಹೆಸರುವಾಸಿಯಾಗಿದ್ದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net