ಅಷ್ಟಕ್ಕೇ ನಿಲ್ಲಿಸದ ಮೆಲೋನಿ, ಅಮೆರಿಕ ಅಧ್ಯಕ್ಷರು ತಮ್ಮ ಮಿತ್ರರಾಷ್ಟ್ರಗಳ ನಾಯಕರೊಂದಿಗೆ ಯಾಕೆ ಹೀಗೆ ನಡೆದುಕೊಳ್ಳುತ್ತಾರೋ ಗೊತ್ತಿಲ್ಲ, ಇದು ಮೊದಲ ಬಾರಿಯೇನಲ್ಲ. ಆದರೆ ಪ್ರಜಾಪ್ರಭುತ್ವದ ವಿರೋಧಿಗಳು ಮತ್ತು ಪಾಶ್ಚಿಮಾತ್ಯ ದೇಶಗಳ ವೈರಿಗಳ ಜೊತೆ ಟ್ರಂಪ್ ಭಾರಿ ಮೃದುವಾಗಿ, ಗೌರವದಿಂದ ನಡೆದುಕೊಳ್ಳುತ್ತಾರೆ. ಆದರೆ ಪ್ರಾಣಸ್ನೇಹಿತ ರಾಷ್ಟ್ರಗಳ ನಾಯಕರನ್ನು ಮಾತ್ರ ಅವಮಾನಿಸುತ್ತಾರೆ ಎಂದು ಟ್ರಂಪ್ ಅವರ ದ್ವಂದ್ವ ನೀತಿಯನ್ನು ಜಾಗತಿಕ ವೇದಿಕೆಯಲ್ಲೇ ಪ್ರಶ್ನಿಸಿದ್ದಾರೆ.