ಈ ಅತ್ಯಾಧುನಿಕ ತಂತ್ರಜ್ಞಾನವು ವಿದೇಶಿ ವಿನಿಮಯ ವೆಚ್ಚವನ್ನು ತಗ್ಗಿಸಲು, ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲು ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಗೆ ದಾರಿ ಮಾಡಿಕೊಡಲು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಇದರ ಅಭಿವೃದ್ಧಿಗೆ ತಗಲುವ ಭಾರಿ ವೆಚ್ಚವು ಸದ್ಯದ ದೊಡ್ಡ ಸವಾಲಾಗಿದ್ದು, ವಿಶೇಷವಾಗಿ ಮೊದಲ ಮತ್ತು ಎರಡನೇ ಹಂತದ ಪ್ರಕ್ರಿಯೆಗಳಿಗೆ ಗಣನೀಯ ಪ್ರಮಾಣದ ವಿದ್ಯುತ್ ಶಕ್ತಿಯ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ, ಇದನ್ನು ವಾಣಿಜ್ಯೋದ್ದೇಶಕ್ಕಾಗಿ ಬೃಹತ್ ಪ್ರಮಾಣದಲ್ಲಿ ವಿಸ್ತರಿಸಲು ಇನ್ನು ಹೆಚ್ಚಿನ ಸಂಶೋಧನೆ ಮತ್ತು ಹೂಡಿಕೆಯ ಅಗತ್ಯವಿದೆಯಾದರೂ, ಪೆಟ್ರೋಲ್ ಬಂಕ್‌ಗಳಲ್ಲಿ ‘ಏರ್ ಫ್ಯುಯೆಲ್’ ಲಭ್ಯವಾಗುವ ದಿನಗಳು ದೂರವಿಲ್ಲ ಎಂದು ವೈಜ್ಞಾನಿಕ ವಲಯ ವಿಶ್ವಾಸ ವ್ಯಕ್ತಪಡಿಸಿದೆ. ಒಂದು ಕಾಲದಲ್ಲಿ ಗಾಳಿಯಿಂದ ಇಂಧನ ತಯಾರಿಸುವ ಕಲ್ಪನೆ ಅಸಾಧ್ಯವೆಂದು ತೋರುತ್ತಿದ್ದರೂ, ಜಪಾನ್‌ನ ಈ ಮಹತ್ವದ ಆವಿಷ್ಕಾರವು ಈಗ ಅದನ್ನು ವಾಸ್ತವದತ್ತ ಕೊಂಡೊಯ್ಯುತ್ತಿದೆ, (ಏಜೆನ್ಸೀಸ್).