ಟೀಕೆ ಮತ್ತು ಟ್ರೋಲ್‌ಗಳು ಒಂದು ಕಡೆಯಿದ್ದರೆ, ಮೈದಾನದಲ್ಲಿ ಮಾತ್ರ ಪೆಶಾವರ್ ಝಲ್ಮಿ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಪಿಎಸ್‌ಎಲ್ ಸೀಸನ್ 11ರ ಆರಂಭಿಕ ಪಂದ್ಯದಲ್ಲೇ ರಾವಲ್ಪಿಂಡಿ ಪೀಂಡೀಸ್ ವಿರುದ್ಧ 215 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ದಾಖಲೆಯ ಜಯ ಸಾಧಿಸಿದೆ. ಇದು ಪಿಎಸ್‌ಎಲ್ ಇತಿಹಾಸದಲ್ಲೇ ಪೆಶಾವರ್ ತಂಡದ ಗರಿಷ್ಠ ರನ್ ಚೇಸಿಂಗ್ ಆಗಿದೆ. ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ತಂಡವು ಸದ್ಯ ಅಂಕಪಟ್ಟಿಯಲ್ಲಿ ಭದ್ರ ಸ್ಥಾನ ಹೊಂದಿದೆ. ಆದರೆ, ಮೈದಾನದ ಪ್ರದರ್ಶನಕ್ಕಿಂತ ಹೆಚ್ಚಾಗಿ ಈ 'ವೇಯ್ಟರ್ ಲುಕ್' ವಿಡಿಯೋ ಮಾತ್ರ ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದೆ,(ಏಜೆನ್ಸೀಸ್).