ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದ ಟ್ರಂಪ್, ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದರು. "ರಾಷ್ಟ್ರೀಯ ಭದ್ರತೆ" ಕಾರಣ ನೀಡಿರುವ ಅವರು, ಈ ಕುರಿತು ತಮ್ಮ ಬಳಿ ಒಂದು "ಫ್ರೇಮ್‌ವರ್ಕ್" ಮತ್ತು "ಒಪ್ಪಂದದ ಪರಿಕಲ್ಪನೆ" ಇದೆ ಎಂದು ಹೇಳಿಕೊಂಡಿದ್ದಾರೆ.