ರಷ್ಯಾ: ಜನಪ್ರಿಯ ಮೆಸೇಜಿಂಗ್ ಆಪ್ ಟೆಲಿಗ್ರಾಮ್ನ ಸಂಸ್ಥಾಪಕ ಪಾವೆಲ್ ಡುರೊವ್ (Pavel Durov) ಅವರು ತಮ್ಮ ವೀರ್ಯ ದಾನದ ಮೂಲಕ ಈಗಾಗಲೇ 100ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ, ಅವರ ವೀರ್ಯವನ್ನು ಬಳಸಿಕೊಂಡು ಗರ್ಭಧಾರಣೆ ಮಾಡಲು ಬಯಸುವ 37 ವರ್ಷದೊಳಗಿನ ಮಹಿಳೆಯರಿಗೆ ಉಚಿತ ಐವಿಎಫ್ ಚಿಕಿತ್ಸೆಯನ್ನು ನೀಡುತ್ತಿರುವುದಾಗಿ ಘೋಷಿಸಿದ್ದಾರೆ.