ಅಪರಿಚಿತರ ಗುಂಡಿಗೆ ಬಲಿಯಾದ ಹಮ್ಜಾ ಬುರ್ಹಾನ್ ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಅಲಿಯಾಸ್ ಡಾಕ್ಟರ್ನನ್ನು ಇಸ್ಲಾಮಾಬಾದ್ನಲ್ಲಿ ಇಸ್ಲಾಂನ ವಿಧಿವಿದಾನದ ಮೂಲಕ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಈ ಅಂತ್ಯಕ್ರಿಯೆಯಲ್ಲಿ, ಕುಖ್ಯಾತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್, ಅಲ್-ಬದ್ರ್ ಹಿರಿಯ ನಾಯಕ ಬಖ್ತ್ ಜಮೀನ್ ಖಾನ್ ಕೈಯಲ್ಲಿ ಎಕೆ-47 ಬಂದೂಕು ಹಾಗೂ ಪಿಸ್ತೂಲ್ಗಳನ್ನು ಹಿಡಿದು ನಡೆದು ಹೋಗುತ್ತಿರುವ ಚಿತ್ರಗಳು ವೈರಲ್ ಆಗಿವೆ.