ಒಂದೆಡೆ ಪಾಕಿಸ್ತಾನ ಈ ರೀತಿಯ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಆದರೆ ಇನ್ನೊಂದೆಡೆ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವೇ ಭಯೋತ್ಪಾದನೆಯ ತವರು ಎಂಬ ಟೀಕೆಗಳು ಕೇಳಿಬರುತ್ತಿವೆ. ಕಳೆದ ಕೆಲವು ದಿನಗಳಲ್ಲಿ ಸುಮಾರು 177 ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಆಂತರಿಕವಾಗಿ ಟಿಟಿಪಿ (TTP) ಮತ್ತು ಬಿಎಲ್‌ಎ (BLA) ಗುಂಪುಗಳ ಅಟ್ಟಹಾಸವನ್ನು ಹತ್ತಿಕ್ಕುವುದು ಈ ಅಗ್ರೆಸಿವ್ ಪ್ಲಾನ್‌ನ ಅತಿದೊಡ್ಡ ಪರೀಕ್ಷೆಯಾಗಿದೆ,(ಏಜೆನ್ಸೀಸ್).