ವರದಿಯ ಪ್ರಕಾರ, ದಕ್ಷಿಣ ಏಷ್ಯಾ ರಾಷ್ಟ್ರಗಳು ಮಾಲಿನ್ಯದ ತೀವ್ರ ಹೊಡೆತಕ್ಕೆ ಸಿಲುಕಿವೆ. ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿದೆ. ಕಳಪೆ ನಗರ ಯೋಜನೆ ಮತ್ತು ಅರಣ್ಯನಾಶವು ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಪಾಕಿಸ್ತಾನ ಸರ್ಕಾರವು ಹಲವಾರು ಗ್ರೀನ್ ಲಾಕ್ಡೌನ್ಗಳನ್ನು ಜಾರಿಗೆ ತಂದಿದ್ದರೂ, ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಿದೆ.