ಹತ್ಯಾಕಾಂಡವನ್ನು ಮಿಲಿಟರಿ ಕಾರ್ಯಾಚರಣೆ ಎನ್ನಬೇಡಿ: ಕಾಬೂಲ್ ಮೇಲಿನ ಪಾಕ್​ ದಾಳಿಗೆ ಭಾರತ ಕಿಡಿ... Pakistan Kabul Attack

ಹತ್ಯಾಕಾಂಡವನ್ನು ಮಿಲಿಟರಿ ಕಾರ್ಯಾಚರಣೆ ಎನ್ನಬೇಡಿ: ಕಾಬೂಲ್ ಮೇಲಿನ ಪಾಕ್​ ದಾಳಿಗೆ ಭಾರತ ಕಿಡಿ... Pakistan Kabul Attack
ಹತ್ಯಾಕಾಂಡವನ್ನು ಮಿಲಿಟರಿ ಕಾರ್ಯಾಚರಣೆ ಎನ್ನಬೇಡಿ: ಕಾಬೂಲ್ ಮೇಲಿನ ಪಾಕ್​ ದಾಳಿಗೆ ಭಾರತ ಕಿಡಿ... Pakistan Kabul Attack
Published on

ಪ್ರಮುಖ ಮುಖ್ಯಾಂಶಗಳು

  • ಕಾಬೂಲ್​ ಮೇಲೆ ಪಾಕಿಸ್ತಾನ ನಡೆಸಿದ್ದು ಹೇಡಿತನ ಮತ್ತು ವಿವೇಚನೆ ಇಲ್ಲದೆ ನಡೆಸಿದ ಕೃತ್ಯ
  • ಕಾಬೂಲ್​ನಲ್ಲಿ ಆಸ್ಪತ್ರೆ ಮತ್ತು ರೋಗಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ
  • ಮಿಲಿಟರಿ ಕಾರ್ಯಾಚರಣೆ ಎಂದು ಬಿಂಬಿಸಿದ ಮಾತ್ರಕ್ಕೆ ನಂಬುವಷ್ಟು ದಡ್ಡರಲ್ಲ ಎಂದ ಭಾರತ
Pakistan Kabul Attack : ಕಾಬೂಲ್​ನಲ್ಲಿರುವ ಆಸ್ಪತ್ರೆ ಮೇಲೆ ಪಾಕಿಸ್ತಾನ ದಾಳಿ ನಡೆಸಿತ್ತು. ಇದರಿಂದ 300ಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಈ ವಾಯುದಾಳಿಯನ್ನು ಭಾರತ ಖಂಡಿಸಿದೆ. ಇದೊಂದು ಹತ್ಯಾಕಾಂಡ, ಹೇಡಿತನ ಮತ್ತು ವಿವೇಚನೆ ಇಲ್ಲದೆ ನಡೆಸಿದ ಕೃತ್ಯ ಇದಾಗಿದೆ ಎಂದು ಕಿಡಿಕಾರಿದೆ. 
ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನ ಮಧ್ಯದ ಗಡಿ ವಿವಾದ ಕಳೆದ ಒಂದು ವರ್ಷದ  ಹಿಂದೆ ಕದನ ವಿರಾಮ ಒಪ್ಪಂದಕ್ಕೆ ಬಂದಿತ್ತು. ಆದರೆ,  ಕಳೆದ ತಿಂಗಳಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿತು. ಇರಾನ್​ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗುದ್ದಾಟದಿಂದಾಗಿ ಜನರು ಅಸ್ಥಿರಗೊಳ್ಳುವ ಸಾಧ್ಯತೆ ಇದೆ.

ಭಾರತ ಹೇಳಿದ್ದಿಷ್ಟು

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಓಮಿಡ್​ ಅಡಿಕ್ಷನ್​ ಆಸ್ಪತ್ರೆ​ ಮೇಲೆ ದಾಳಿ ಮಾಡಿರುವುದು, ಅದರ ಸಾರ್ವಭೌಮತ್ವದ ಮೇಲೆ ನಡೆಸಿದ ಸ್ಪಷ್ಟ ದಾಳಿಯಾಗಿದೆ. ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿ ಮೇಲೆ ಘೋರ ಆಕ್ರಮಣ. ಪಾಕಿಸ್ತಾನ ತನ್ನ ಅಜಾಗರೂಕ ವರ್ತನೆಯನ್ನು ಗಡಿ ಮೀರಿ ವಿಸ್ತರಿಸುತ್ತಿದೆ.  ಪಾಕಿಸ್ತಾನ ಈ ಹತ್ಯಾಕಂಡವನ್ನು ಈಗ ಮಿಲಿಟರಿ ಕಾರ್ಯಾಚರಣೆ ಎಂದು ಬಿಂಬಿಸಲು ಯತ್ನಿಸುತ್ತಿದೆ.

ಹೇಳಿದ್ದೆಲ್ಲ ನಂಬೋದಿಲ್ಲ

ಪಾಕಿಸ್ತಾನ ತನ್ನ ವೈಫಲ್ಯಗಳನ್ನು  ಹತಾಶೆ ಮತ್ತು ಹಿಂಸಾಚಾರದ ಮೂಲಕ ತೋರ್ಪಡಿಸುತ್ತಿದೆ. ಇದೇ ನಡೆಯನ್ನು ಪುನರಾವರ್ತಿಸುತ್ತಿದೆ. ಆಸ್ಪತ್ರೆ ಮತ್ತು ರೋಗಿಗಳನ್ನು ಗುರಿಯಾಗಿಸಿಕೊಂಡು ಉದ್ದೇಶ ಪೂರ್ವಕಾಗಿ ದಾಳಿ ನಡೆಸಿದೆ. ಈಗ ಅದನ್ನು ಸಮರ್ಥಿಸಿಕೊಳ್ಳುವುದರಲ್ಲಿ ಯಾವ ನೈತಿಕತೆಯನ್ನು ಹೊಂದಿಲ್ಲ. ಅದನ್ನು ನಂಬುವಷ್ಟು ದಡ್ಡರು ಇಲ್ಲ ಎಂದು ತಿಳಿಸಿದೆ.
ಪ್ರಪಂಚದಲ್ಲಿ ಎಲ್ಲ ಮುಸಲ್ಮಾನರು ಅತ್ಯಂತ ಶಾಂತಿಯುತವಾಗಿರುವ ಸಮಯ.  ಇಂತಹ ಪವಿತ್ರ ರಂಜಾನ್​ ತಿಂಗಳಲ್ಲಿ ಈ ದಾಳಿ ನಡೆಸಿರುವುದು ಅತ್ಯಂತ ಖಂಡನೀಯ.  ಅಂತರರಾಷ್ಟ್ಟೀಯ ಈ ಅಪರಾಧವನ್ನು ನಿಲ್ಲಿಸಲು ಮಧ್ಯಪ್ರವೇಶಿಸಬೇಕು. ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬೇಕು.  ಈ ಕೃತ್ಯದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಕಾಬೂಲ್​ನ ಆಸ್ಪತ್ರೆ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಗಿದೆ. ದಾಳಿಯಲ್ಲಿ ಗಂಭೀರ ಗಾಯಗೊಂಡ ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net