ಅಮೆರಿಕ-ಇರಾನ್ ಕದನವಿರಾಮದ ಬಳಿಕ ಉಭಯ ದೇಶಗಳ ನಡುವೆ ನಡೆದ ಮೊದಲ ಮಾತುಕತೆ, ಯಾವುದೇ ನಿರ್ಣಾಯಕ ಹಂತಕ್ಕೆ ತಲುಪದೆ ವಿಫಲವಾಗಿದೆ. ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನ ಮೂಕಪ್ರೇಕ್ಷಕನಾಗಿದೆ. ಆದರೆ, ಇಷ್ಟೆಲ್ಲ ಶಕ್ತಿಶಾಲಿ ರಾಷ್ಟ್ರಗಳಿದ್ದರೂ, ಎಲ್ಲ ರಂಗಗಳಲ್ಲೂ ವಿಫಲವಾಗಿರುವ ಪಾಕಿಸ್ತಾನವನ್ನು ಟ್ರಂಪ್ ಸಂಧಾನ ನಡೆಸಲು ಆಯ್ಕೆ ಮಾಡಿಕೊಂಡಿರುವುದು ಅಂತಾರಾಷ್ಟ್ರೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇದರ ಹಿಂದೆ ಟ್ರಂಪ್ ರಹಸ್ಯ ರಣತಂತ್ರ ಕೆಲಸ ಮಾಡಿದ್ದು, ಪಾಕಿಸ್ತಾನವನ್ನು ಹೊಸ ಅಸ್ತ್ರದಂತೆ ಬಳಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಹಿಂದೆಯೂ ಪಾಕಿಸ್ತಾನ ಅಮೆರಿಕಕ್ಕೆ ರಾಜತಾಂತ್ರಿಕವಾಗಿ ನೆರವಾಗಿದ್ದು, ಅದರ ಬದಲಿಗೆ ಸಾಕಷ್ಟು ಲಾಭ ಮಾಡಿಕೊಂಡಿದೆ. ಈ ಎಲ್ಲ ಸಂಗತಿಗಳ ಅವಲೋಕನ ಇಲ್ಲಿದೆ.