ಪಾಕ್ನ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, ಸೇನೆಯು ಗುಪ್ತಚರ ಆಧಾರಿತ ಮತ್ತು ಆಯ್ದ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಹೇಳಿಕೊಂಡಿದ್ದು, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಸಂಬಂಧಿಸಿದ ಏಳು ಶಿಬಿರಗಳನ್ನು ಗುರಿಯಾಗಿಸಿಕೊಂಡಿದೆ. ಟಿಟಿಪಿ ಪಾಕಿಸ್ತಾನಿ ಉಗ್ರಗಾಮಿ ಗುಂಪಾಗಿದ್ದು, ದೇಶದಲ್ಲಿ ನಡೆದ ಅನೇಕ ದಾಳಿಗಳಿಗೆ ಹೊಣೆ ಹೊತ್ತುಕೊಂಡಿದೆ.