ವಿಶ್ವಕಪ್ ಬಹಿಷ್ಕರಿಸುವ ಯಾವುದೇ ಉದ್ದೇಶ ಪಾಕಿಸ್ತಾನಕ್ಕಿಲ್ಲ ಎಂಬುದು ಅವರ ಪ್ರಯಾಣದ ವೇಳಾಪಟ್ಟಿಯಿಂದ ಸ್ಪಷ್ಟವಾಗಿದೆ. ಮೂಲಗಳ ಪ್ರಕಾರ, ಪಾಕಿಸ್ತಾನ ತಂಡವು ಫೆಬ್ರವರಿ 2 ರಂದು ಲಾಹೋರ್‌ನಿಂದ ಶ್ರೀಲಂಕಾದ ಕೊಲಂಬೊಗೆ ತೆರಳಲಿದೆ. ಅಷ್ಟೇ ಅಲ್ಲದೆ, ಫೆಬ್ರವರಿ 15 ರಂದು ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ತಂಡ ಕಣಕ್ಕಿಳಿಯುವುದು ಈಗ ಖಚಿತವಾಗಿದೆ.