ವರದಿಗಳ ಪ್ರಕಾರ, ಬಿಎಲ್‌ಎ ಹೋರಾಟಗಾರರು ಕ್ವೆಟ್ಟಾ, ಕೆಚ್, ಮಸ್ತುಂಗ್, ಪಂಜ್‌ಗುರ್, ನುಷ್ಕಿ, ಖುಜ್ದಾರ್ ಮತ್ತು ಕಚ್ಚಿ ಜಿಲ್ಲೆಗಳ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ರಾಕೆಟ್ ಲಾಂಚರ್ ಮತ್ತು ಐಇಡಿ (IED) ಸ್ಫೋಟಕಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಪಾಕಿಸ್ತಾನ ಸೇನೆಯ ಬೆಂಗಾವಲು ಪಡೆಗಳು, ಚೆಕ್‌ಪೋಸ್ಟ್‌ಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ.