2025ರ ಆಕ್ಸ್‌ಫರ್ಡ್ ವರ್ಡ್​ 'ರೇಜ್ ಬೇಟ್'! ​ಅಷ್ಟಕ್ಕೂ ಈ ಪದದ ಅರ್ಥವೇನು? ಇಲ್ಲಿದೆ ಮಾಹಿತಿ

ಆಕ್ಸ್​ಫರ್ಡ್​ ವರ್ಡ್​ ಆಫ್​ ದಿ ಇಯರ್​
ಆಕ್ಸ್​ಫರ್ಡ್​ ವರ್ಡ್​ ಆಫ್​ ದಿ ಇಯರ್​
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವರ್ಷದಂತೆ ಈ ವರ್ಷವು ಒಂದು ಪದವನ್ನು ವರ್ಡ್​ ಆಫ್​ ದಿ ಇಯರ್​ ಎಂದು ಘೋಷಣೆ
  • ರೇಜ್ ಬೇಟ್ ​2025ರ ವರ್ಷದ ಆಕ್ಸ್‌ಫರ್ಡ್ ಪದ
  • ಕಳೆದ 5 ವರ್ಷಗಳಿಂದ ಆಕ್ಸ್‌ಫರ್ಡ್ ವರ್ಷದ ಪದಗಳು ಯಾವೆಲ್ಲ ಗೊತ್ತಾ?
ನವದೆಹಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಪ್ರತಿ ವರ್ಷದಂತೆ ಈ ವರ್ಷವು ಒಂದು ಪದವನ್ನು ವರ್ಡ್​ ಆಫ್​ ದಿ ಇಯರ್​ ಎಂದು ಘೋಷಿಸಿದ್ದು, 'ರೇಜ್ ಬೇಟ್​' ಅನ್ನು 2025ರ ವರ್ಷದ ಆಕ್ಸ್‌ಫರ್ಡ್ ಪದವೆಂದು ಪ್ರಕಟಿಸಿದೆ. 
ಪ್ರತಿ ವರ್ಷ ಭಾಷಾ ಜಗತ್ತನ್ನು ಆಕರ್ಷಿಸುವ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP), ತನ್ನ ವರ್ಷದ ಪದವನ್ನು ಈ ಬಾರಿಯೂ ಘೋಷಿಸಿದೆ. 2025ಕ್ಕೆ ಆಯ್ಕೆ ಮಾಡಲಾದ ಪದವು ರೇಜ್ ಬೇಟ್​ ಆಗಿದ್ದು, ಈ ಪದವನ್ನು ಏಕೆ ಆಯ್ಕೆ ಮಾಡಲಾಯಿತು? ಅಸಲಿಗೆ, ರೇಜ್ ಬೇಟ್​ ಎಂದರೇನು? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ. ಆಕ್ಸ್‌ಫರ್ಡ್ ಪ್ರಕಾರ, ರೇಜ್ ಬೇಟ್ ಎಂದರೆ ಕೋಪ ಅಥವಾ ಅಸಮಾಧಾನವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಡಿಸೈನ್​ ಮಾಡಲಾದ ಆನ್‌ಲೈನ್ ವಿಷಯ ಎನ್ನಲಾಗಿದೆ.
ಸಾಮಾನ್ಯವಾಗಿ ವೆಬ್‌ಸೈಟ್ ಟ್ರಾಫಿಕ್ ಅಥವಾ ಸಾಮಾಜಿಕ ಮಾಧ್ಯಮ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಈ ಪದವನ್ನು ಪೋಸ್ಟ್ ಮಾಡಲಾಗುತ್ತದೆ. ಇಂಗ್ಲಿಷ್‌ನಲ್ಲಿ, ಇದು 'ರೇಜ್' (ಕೋಪ) + 'ಬೇಟ್' (ಆಹಾರ ಪಡೆಯವ ತಂತ್ರ ಅಥವಾ ಟ್ರಾಪ್​). ನೀವು ಪೋಸ್ಟ್ ಅನ್ನು ನೋಡಿ "ವಾಟ್ ದಿ ಹೆಲ್" ಎಂದು ಕಮೆಂಟ್ ಮಾಡ್ತೀರಾ? ಅದು ರೇಜ್ ಬೇಟ್‌ನ ಉದಾಹರಣೆಯಾಗಿದೆ. ಈ ಪದವನ್ನು ಮೊದಲು 2002ರಲ್ಲಿ ಬಳಸಲಾಯಿತು. ಆದರೆ, 2025ರಲ್ಲಿ ಇದರ ಬಳಕೆ ಮೂರು ಪಟ್ಟು ಹೆಚ್ಚಾಗಿದೆ. ಮೂರು ದಿನಗಳ ಜಾಗತಿಕ ಸಮೀಕ್ಷೆಯಲ್ಲಿ 30,000ಕ್ಕೂ ಅಧಿಕ ಮತಗಳ ಆಧಾರದ ಮೇಲೆ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP) ಇದನ್ನು ಅಧಿಕೃತವಾಗಿ 2025ರ ಆಕ್ಸ್‌ಫರ್ಡ್ ಪದ ಎಂದು ಹೆಸರಿಸಿದೆ.

ಕಳೆದ 5 ವರ್ಷಗಳಿಂದ ಆಕ್ಸ್‌ಫರ್ಡ್ ವರ್ಷದ ಪದ

2025: ರೇಜ್ ಬೇಟ್
2024: ಬ್ರೈನ್ ರಾಟ್​
2023: ರಿಡ್ಜ್
2022: ಗಾಬ್ಲಿನ್ ಮೋಡ್
2021: ವ್ಯಾಕ್ಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net