ನಮ್ಮ ಸೇನೆಗೆ ಭಾರತವನ್ನು ಎದರಿಸುವ ತಾಕತ್ತಿಲ್ಲ: ಆಪರೇಷನ್​ ಸಿಂಧೂರಕ್ಕೆ ಪಾಕಿಸ್ತಾನ ಬೆಚ್ಚಿಬಿದ್ದಿದೆ; ಇಮ್ರಾನ್​ ಖಾನ್​ ಸಹೋದರಿ ಸ್ಪೋಟಕ ಹೇಳಿಕೆ! Noreen Niazi on Operation Sindhoor

ಇಮ್ರಾನ್ ಖಾನ್ ಸಹೋದರಿ ನೊರೀನ್ ನಿಯಾಜಿ ಸ್ಫೋಟಕ ಆರೋಪ
ಇಮ್ರಾನ್ ಖಾನ್ ಸಹೋದರಿ ನೊರೀನ್ ನಿಯಾಜಿ ಸ್ಫೋಟಕ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ 'ಆಪರೇಷನ್ ಸಿಂಧೂರ್' ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ಸೇನೆ
  • ಸೋಲು ಮುಚ್ಚಿಡಲು ಇಸ್ರೇಲ್ ಹಾಗೂ ಅಮೆರಿಕ ಜೊತೆ ರಹಸ್ಯ ಒಪ್ಪಂದ
  • ಇಮ್ರಾನ್ ಖಾನ್ ಸಹೋದರಿ ನೊರೀನ್ ನಿಯಾಜಿ ಸ್ಫೋಟಕ ಆರೋಪ
ಇಸ್ಲಾಮಾಬಾದ್​: ಪಾಕಿಸ್ತಾನದ ಸೇನಾಧಿಕಾರಿಗಳು ತಮ್ಮ ಹೀನಾಯ ಸೋಲನ್ನು ಮುಚ್ಚಿಡಲು ಸುಳ್ಳು ಕಥೆಗಳನ್ನು ಹೆಣೆಯುತ್ತಿದ್ದಾರೆ. ಭಾರತ ನಡೆಸಿದ ಆಪರೇಷನ್ ಸಿಂಧೂರ್ ಯಶಸ್ಸಿನ ಭೀತಿಯಿಂದ ಪಾಕ್ ಸೇನೆ ಜಾಗತಿಕ ಮಟ್ಟದಲ್ಲಿ ರಹಸ್ಯ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ನೊರೀನ್ ನಿಯಾಜಿ (Noreen Niazi on Operation Sindhoor) ಹೇಳಿದ್ದಾರೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ಸಹೋದರಿ ಮಾಡಿರುವ ಈ ಗಂಭೀರ ಆರೋಪ ಈಗ ಇಡೀ ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

88 ಗಂಟೆಗಳಲ್ಲಿ ಪಾಕಿಸ್ತಾನವನ್ನು ಸೈಲೆಂಟ್ ಮಾಡಿದ ಭಾರತ!

ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಿಂದಾಗಿ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿದೆ ಎಂದು ಹೇಳಲಾಗುತ್ತಿದೆ. ಭಾರತ ಅತ್ಯಂತ ಚಾಣಾಕ್ಷತನದಿಂದ ನಡೆಸಿದ ಸರಣಿ ಕ್ಷಿಪಣಿ ದಾಳಿಗಳಿಂದ ಪಾಕಿಸ್ತಾನ ಚೇತರಿಸಿಕೊಳ್ಳಲು ಅವಕಾಶವೇ ದೊರೆಯಲಿಲ್ಲ. ಕೇವಲ 88 ಗಂಟೆಗಳ ಅವಧಿಯಲ್ಲಿ ಭಾರತೀಯ ಸೇನೆಯು ಪ್ರಮುಖ ಸಂಘರ್ಷ ವಲಯಗಳಲ್ಲಿ ಸಂಪೂರ್ಣ ಪ್ರಾಬಲ್ಯವನ್ನು ಸಾಧಿಸಿತು ಎನ್ನಲಾಗುತ್ತಿದೆ.
ಭಾರತದ ಈ ಡಿಜಿಟಲ್ ಹಾಗೂ ಕ್ಷಿಪಣಿ ದಾಳಿಯ ವೇಗ ಎಷ್ಟಿತ್ತೆಂದರೆ, ಪಾಕಿಸ್ತಾನದ ರಕ್ಷಣಾ ರೇಡಾರ್ ಮತ್ತು ನೆಟ್‌ವರ್ಕ್‌ಗಳು ಸಂಪೂರ್ಣವಾಗಿ ಬ್ಲಾಂಕ್ ಆಗಿದ್ದವು. ರಾವಲ್ಪಿಂಡಿಯಲ್ಲಿರುವ ಪಾಕ್ ಸೇನಾ ಪ್ರಧಾನ ಕಚೇರಿ ಏನು ಮಾಡಬೇಕೆಂದು ತಿಳಿಯದೆ ಹತಾಶ ಸ್ಥಿತಿಗೆ ತಲುಪಿತ್ತು.
ಈ ಕಾರ್ಯಾಚರಣೆಯು ಗಡಿಯಲ್ಲಿ ಸಾಂಪ್ರದಾಯಿಕ ಮಿಲಿಟರಿ ಸಮತೋಲನವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತು ಮತ್ತು ಭಾರತದ ಸೇನಾ ಶಕ್ತಿ ಎಷ್ಟು ಅಪಾರವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತು ಎಂದು ಹೇಳುತ್ತಿದ್ದಾರೆ.

ಟ್ರಂಪ್ ಎಂಟ್ರಿ ಮತ್ತು ಇಸ್ರೇಲ್ ಜೊತೆ ಸೀಕ್ರೆಟ್ ಡೀಲ್?

ನೊರೀನ್ ನಿಯಾಜಿ ಅವರ ಆರೋಪಗಳ ಪ್ರಕಾರ, ಭಾರತದ ಆವೇಗಕ್ಕೆ ಹೆದರಿದ ಪಾಕಿಸ್ತಾನ ಆರ್ಮಿ ಚೀಫ್ ಜನರಲ್ ಅಸಿಮ್ ಮುನೀರ್ ತಕ್ಷಣವೇ ಅಮೆರಿಕದ ಮೊರೆ ಹೋದರು.
ಪಾಕ್ ಸೇನೆಗೆ ಮುಖಭಂಗದಿಂದ ಬದಲಿ ದಾರಿ ಕಲ್ಪಿಸಲು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದರು. ಆದರೆ, ಈ ಅಮೆರಿಕದ ರಕ್ಷಣೆ ಸುಮ್ಮನೆ ಸಿಗಲಿಲ್ಲ; ಅದಕ್ಕೆ ಪಾಕಿಸ್ತಾನ ಭಾರಿ ಬೆಲೆ ತೆರಬೇಕಾಗಿ ಬಂದಿದೆ ಎಂದಿದ್ದಾರೆ.
ರಾಜತಾಂತ್ರಿಕ ರಕ್ಷಣೆಗೆ ಪ್ರತಿಯಾಗಿ ಪಾಕಿಸ್ತಾನವು ಅಬ್ರಹಾಂ ಒಪ್ಪಂದಕ್ಕೆ (Abraham Accords) ಔಪಚಾರಿಕವಾಗಿ ಸೇರ್ಪಡೆಯಾಗಲು ಮತ್ತು ಇಸ್ರೇಲ್ ದೇಶವನ್ನು ಅಧಿಕೃತವಾಗಿ ಗುರುತಿಸಲು ಜನರಲ್ ಅಸಿಮ್ ಮುನೀರ್ ಒಪ್ಪಿಕೊಂಡಿದ್ದಾರೆ ಎಂದು ನಿಯಾಜಿ ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲೇ, ಜಾಗತಿಕ ನಾಯಕರ ಮನವಿಯ ಮೇರೆಗೆ ಭಾರತವು ತನ್ನ ದಾಳಿಯ ತೀವ್ರತೆಯನ್ನು ಕೊಂಚ ಕಡಿಮೆ ಮಾಡಿತು ಎನ್ನಲಾಗಿದೆ.

ನಮ್ಮ ಸೇನೆಗೆ ಭಾರತವನ್ನು ಎದುರಿಸುವ ತಾಕತ್ತಿಲ್ಲ!

ರಾಜತಾಂತ್ರಿಕ ಪಿತೂರಿಗಳಷ್ಟೇ ಅಲ್ಲದೆ, ಪಾಕಿಸ್ತಾನದ ಆಂತರಿಕ ರಕ್ಷಣಾ ಕೊರತೆಯನ್ನು ನಿಯಾಜಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಸಾಮಗ್ರಿ, ತಂತ್ರಜ್ಞಾನ ಮತ್ತು ಆರ್ಥಿಕ ಬಲದಲ್ಲಿ ಭಾರತದ ಮಿಲಿಟರಿ ಶಕ್ತಿ ಪಾಕಿಸ್ತಾನಕ್ಕಿಂತ ಕನಿಷ್ಠ ನಾಲ್ಕು ಪಟ್ಟು ಬಲಿಷ್ಠವಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಿರುವಾಗ ಭಾರತೀಯ ಸಶಸ್ತ್ರ ಪಡೆಗಳನ್ನು ಸೋಲಿಸುವ ಯಾವುದೇ ಸಾಮರ್ಥ್ಯ ಪಾಕ್ ಸೇನೆಗೆ ಇಲ್ಲ ಎಂದು ಅವರು ಸ್ವಂತ ದೇಶದ ಮಿಲಿಟರಿ ಶಕ್ತಿಯನ್ನು ಲೇವಡಿ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net