ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ: ಪಾಕಿಸ್ತಾನಕ್ಕೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ನೇರ ಎಚ್ಚರಿಕೆ | Upendra Dwivedi

ಸೇನಾ ಮುಖ್ಯಸ್ಥ (COAS) ಜನರಲ್ ಉಪೇಂದ್ರ ದ್ವಿವೇದಿ
ಸೇನಾ ಮುಖ್ಯಸ್ಥ (COAS) ಜನರಲ್ ಉಪೇಂದ್ರ ದ್ವಿವೇದಿ
Published on
ನವದೆಹಲಿ: ಭಾರತವು ಆಪರೇಷನ್ ಸಿಂಧೂರ ಮುಂದುವರೆಯುತ್ತಿದೆ ಮತ್ತು ಪಾಕಿಸ್ತಾನದಿಂದ ಭವಿಷ್ಯದಲ್ಲಿ ಯಾವುದೇ ದುಸ್ಸಾಹಸ ಮಾಡಿದರೆ, ಅದಕ್ಕೆ ದೃಢ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ (COAS) ಜನರಲ್ ಉಪೇಂದ್ರ ದ್ವಿವೇದಿ(Upendra Dwivedi) ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸೇನೆಯ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಪ್ರಬಲ ಭಾಷಣ ಮಾಡಿದ ಉಪೇಂದ್ರ ದ್ವಿವೇದಿ, ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ 2025ರ ಮೇನಲ್ಲಿ ಪ್ರಾರಂಭಿಸಿದ ಆಪರೇಷನ್ ಸಿಂಧೂರವು ಭಾರತೀಯ ಸೇನೆಗೆ ಒಂದು ಮಹತ್ವದ ತಿರುವು ಎಂದು ಹೇಳಿದ್ದಾರೆ.
ನಮಗೆ ಸ್ಪಷ್ಟವಾದ ರಾಜಕೀಯ ನಿರ್ದೇಶನದ ಅಡಿಯಲ್ಲಿ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ನಡುವಿನ ಸಮನ್ವಯದ ಅತ್ಯುತ್ತಮ ಉದಾಹರಣೆ ಎಂದು ಸಿಂಧೂರವನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, 2025ರ ಮೇ 7 ರಂದು ಪ್ರಾರಂಭವಾದ 88 ಗಂಟೆಗಳ ಕಾರ್ಯಚರಣೆಯನ್ನು ಕಾರ್ಯಗತಗೊಳಿಸಿದ ಸೇನೆಯು ಗಡಿಯುದ್ದಕ್ಕೂ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶ ಮಾಡಿತು. ಉಗ್ರರ ಒಂಬತ್ತು ನೆಲೆಗಳಲ್ಲಿ ಏಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದ್ದೇವೆ ಎಂದು ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಭಾರತದ ಸಾಂಪ್ರದಾಯಿಕ ದಾಳಿ ಸ್ಥಳವನ್ನು ವಿಸ್ತರಿಸುವ ಮೂಲಕ ಈ ಕಾರ್ಯಾಚರಣೆಯು ಪಾಕಿಸ್ತಾನದ ದೀರ್ಘಕಾಲದ ಪರಮಾಣು ಬೆದರಿಕೆಯನ್ನು ಯಶಸ್ವಿಯಾಗಿ ನಿವಾರಿಸಿದ್ದೇವೆ. ಅಲ್ಲದೆ, ಆಪರೇಷನ್ ಸಿಂಧೂರವು ನಮ್ಮ ಸಿದ್ಧತೆ, ನಿಖರತೆ ಮತ್ತು ಕಾರ್ಯತಂತ್ರದ ಸ್ಪಷ್ಟತೆಯನ್ನು ಪ್ರದರ್ಶಿಸಿತು ಜನರಲ್ ದ್ವಿವೇದಿ ಪ್ರತಿಪಾದಿಸಿದ್ದಾರೆ.

ಪ್ರಸ್ತುತ ಭದ್ರತಾ ಸ್ಥಿತಿ

ಈ ಕಾರ್ಯಾಚರಣೆಯು ತಂತ್ರವು ಯಥಾಸ್ಥಿತಿಯನ್ನು ಮರುಹೊಂದಿಸಿದೆ. ಆದರೆ, ಸಿಂಧೂರ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಎದುರಾಳಿಗೆ ಸಂದೇಶ

ಇತ್ತೀಚೆಗೆ ಭಾರತದ ಗಡಿಯೊಳಗೆ ಪಾಕ್​ ಡ್ರೋನ್ ಪ್ರವೇಶಿಸಿದ್ದವು. ಅಲ್ಲದೆ, ಗಡಿಯಾಚೆಗಿನ ಒಳನುಸುಳುವಿಕೆ ಪ್ರಯತ್ನಗಳಲ್ಲಿ ಕಂಡುಬಂದಿರುವ ಏರಿಕೆಯನ್ನು ಉದ್ದೇಶಿಸಿ ಮಾತನಾಡಿದ ಜನರಲ್ ದ್ವಿವೇದಿ, ಆಪರೇಷನ್ ಸಿಂಧೂರವು ಉತ್ತುಂಗದ ಸಮಯದಲ್ಲಿ ಭಾರತೀಯ ಸೇನೆಯು ತನ್ನ ಸೈನ್ಯವನ್ನು ಸಜ್ಜುಗೊಳಿಸಿದೆ. ತಲಮಟ್ಟದ ದಾಳಿಗೆ ಸಿದ್ಧವಾಗಿದೆ. 2025 ರಲ್ಲಿ 31 ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. ಅವರಲ್ಲಿ ಶೇ.65 ಪಾಕಿಸ್ತಾನಿ ಮೂಲದವರು - ಭಾರತೀಯ ಸೇನೆಯು ತನ್ನ ಜಂಟಿತೆ, ಆತ್ಮನಿರ್ಭರ ಮತ್ತು ನಾವೀನ್ಯತೆ" (ಜೆಎಐ) ಉಪಕ್ರಮಗಳ ಪ್ರಗತಿಯಿಂದ ತೃಪ್ತವಾಗಿದೆ ಎಂದು ದ್ವಿವೇದಿ ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net