ಆಪರೇಷನ್ ಸಿಂಧೂರ ಕೇವಲ ಟ್ರೇಲರ್ ಆಗಿತ್ತು; ಪಾಕ್​ಗೆ ಖಡಕ್ ವಾರ್ನಿಂಗ್​ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ | Pakistan

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
Published on
ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ(Pakistan) ಆಪರೇಷನ್ ಸಿಂಧೂರವು ಕೇವಲ ಟ್ರೇಲರ್ ಮಾತ್ರ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸೋಮವಾರ (ನ.17) ಎಚ್ಚರಿಸಿದ್ದಾರೆ.
ಈ ಬಗ್ಗೆ ಚಾಣಕ್ಯ ರಕ್ಷಣಾ ಸಂವಾದದಲ್ಲಿ ಮಾತನಾಡಿದ ಜನರಲ್ ದ್ವಿವೇದಿ, ಪಾಕ್​ ಭಯೋತ್ಪಾದನೆಗೆ ಉತ್ತೇಜನ ನೀಡುವುದು ನಮಗೆ ಕಳವಳಕಾರಿ ವಿಷಯವಾಗಿದೆ. ನಾವು ಪ್ರಗತಿಯ ಬಗ್ಗೆ ಮಾತನಾಡುತ್ತೇವೆ. ಆದರೆ ಯಾರಾದರೂ ಅಡೆತಡೆಗಳನ್ನು ಸೃಷ್ಟಿಸಿದರೆ, ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ಅಲ್ಲದೆ, ಭಯೋತ್ಪಾದಕರು ಮತ್ತು ಅವರನ್ನು ನಿರ್ವಹಿಸುವವರಿಗೆ ನಾವು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತೇವೆ. ಉಗ್ರರಿಂದ ಬೆದರಿಕೆ ಪತ್ರ ಬಂದರೂ, ಯಾರಿಗೆ ಉತ್ತರಿಸಬೇಕೆಂದು ನಮಗೆ ನಿಖರವಾಗಿ ತಿಳಿದಿದೆ ಎಂದು ಖಡಕ್ ​ವಾರ್ನಿಂಗ್ ನೀಡಿದ್ದಾರೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುತ್ತಲೇ ಇದೆ. ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರವು ಕೇವಲ ಟ್ರೇಲರ್ ಆಗಿತ್ತು ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.  

ಬಹುಕ್ಷೇತ್ಷಿಯ ಯುದ್ಧಕ್ಕೆ ಭಾರತ ಸಿದ್ಧ

ಮುಂದುವರೆದು ಮಾತನಾಡಿದ ದ್ವಿವೇದಿ, ಇಂದಿನ ಕಾಲದಲ್ಲಿ ಯುದ್ಧಗಳು ಬಹು-ಕ್ಷೇತ್ರಗಳಾಗಿವೆ. ಇದು ಎಷ್ಟು ಕಾಲ ಉಳಿಯುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ದೀರ್ಘಕಾಲ ಉಳಿಯಲು ನಮಗೆ ಸರಬರಾಜುಗಳಿವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಭಾರತದ ವಿರುದ್ಧ ಸೃಷ್ಟಿಸಲಾದ ಯಾವುದೇ ಉಗ್ರ ಅಡಚಣೆಯು ದೃಢವಾದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತದೆ ಎಂದಿದ್ದಾರೆ.
 ಪಾಕ್​ ಜತೆ ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಸೇನೆಯು ಸ್ಪಷ್ಟಪಡಿಸಿದೆ. ಭಾರತವು ಶಾಂತಿಯುತ ಪ್ರಕ್ರಿಯೆಯನ್ನು ಮಾತ್ರ ಕೇಳುತ್ತದೆ. ಅದನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ಜನರಲ್ ದ್ವಿವೇದಿ ತಿಳಿಸಿದ್ದಾರೆ.

ಚೀನಾ ಗಡಿ ಪರಿಸ್ಥಿತಿಯ ಜನರಲ್ ದ್ವಿವೇದಿ ಮಾತು

ಭಾರತ-ಚೀನಾ ಗಡಿ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ ಸೇನಾ ಮುಖ್ಯಸ್ಥರು, ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಬದಲಾವಣೆಗಳು ಮತ್ತು ಸುಧಾರಣೆಗಳು ನಡೆದಿವೆ. ಕಳೆದ ವರ್ಷ ಅಕ್ಟೋಬರ್ 1 ರಿಂದ ಎರಡೂ ದೇಶಗಳ ನಾಯಕರು ಚರ್ಚೆ ನಡೆಸಿದ್ದಾರೆ ಮತ್ತು ಅನೇಕ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ, ರಕ್ಷಣಾ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ, ಮಂಜುಗಡ್ಡೆ ಕರಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಗತ್ಯವನ್ನು ಹೇಳಿದ್ದರು ಎಂದು ದ್ವಿವೇದಿ ನೆನಪಿಸಿಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net