ಅಲ್ ಜಜೀರಾ ಮತ್ತು ಓಮನ್ ಟಿವಿಯ ವರದಿಗಳ ಪ್ರಕಾರ, ಸಲಾಹ್ ಬಂದರಿನಲ್ಲಿರುವ ತೈಲ ಸಂಗ್ರಹಣಾ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ. ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ 'ಅಂಬ್ರೆ' (Ambrey) ಈ ದಾಳಿಯನ್ನು ಖಚಿತಪಡಿಸಿದ್ದು, ಬಂದರಿನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ. ಆದರೆ, ಅದೃಷ್ಟವಶಾತ್ ಹತ್ತಿರದಲ್ಲಿದ್ದ ವಾಣಿಜ್ಯ ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.