ಭಾರತ ಮಾತ್ರವಲ್ಲ, ಈ ದೇಶಗಳೊಂದಿಗೂ ಯುದ್ಧ ಮಾಡಿದೆ ಪಾಕಿಸ್ತಾನ! ಎಲ್ಲೆಲ್ಲಿ ಸೋಲು ಗೊತ್ತಾ? | Pakistan

Pakistan
Pakistan
Published on
ನವದೆಹಲಿ:ಭಾರತ ಮತ್ತು ಪಾಕಿಸ್ತಾನ(Pakistan) ನಡುವಿನ ಯುದ್ಧಗಳ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ಸ್ವಾತಂತ್ರ್ಯ ಸಿಕ್ಕ ದಿನದಿಂದಲೂ ಪಾಕಿಸ್ತಾನವು ಭಾರತದ ವಿರುದ್ಧ ನಾಲ್ಕು ಬಾರಿ ನೇರ ಯುದ್ಧ ಮಾಡಿ, ಪ್ರತಿ ಬಾರಿಯೂ ಮುಖಭಂಗ ಅನುಭವಿಸಿದೆ. ಆದರೆ, ಪಾಕಿಸ್ತಾನ ಕೇವಲ ಭಾರತದೊಂದಿಗೆ ಮಾತ್ರ ಯುದ್ಧ ಮಾಡಿಲ್ಲ ಎಂಬ ವಿಷಯ ನಿಮಗೊತ್ತೇ? ಹೌದು, ತನ್ನದೇ ನೆರೆಹೊರೆಯ ದೇಶಗಳು ಹಾಗೂ ಇತರ ಕೆಲವು ದೇಶಗಳ ವಿರುದ್ಧವೂ ಪಾಕಿಸ್ತಾನ ಸೇನೆ ಯುದ್ಧಕ್ಕೆ ಇಳಿದು ಸೋತು ಸುಣ್ಣವಾಗಿದೆ. ಆ ದೇಶಗಳು ಯಾವುವು ಮತ್ತು ಅಲ್ಲಿ ಏನಾಯಿತು ಎಂಬ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

1. ಅಫ್ಘಾನಿಸ್ತಾನದೊಂದಿಗೆ ಸುದೀರ್ಘ ಸಂಘರ್ಷ

ಪಾಕಿಸ್ತಾನಕ್ಕೆ ಭಾರತದಷ್ಟೇ ದೊಡ್ಡ ತಲೆನೋವಾಗಿರುವುದು ಅದರ ಮತ್ತೊಂದು ನೆರೆ ದೇಶವಾದ ಅಫ್ಘಾನಿಸ್ತಾನ. ಇವೆರಡೂ ದೇಶಗಳ ನಡುವೆ ಗಡಿ ರೇಖೆಯಾದ 'ಡುರಾಂಡ್ ಲೈನ್' ವಿಚಾರದಲ್ಲಿ ದಶಕಗಳಿಂದ ಜಗಳ ನಡೆಯುತ್ತಲೇ ಇದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದ ಮೇಲಂತೂ ಈ ಗಡಿ ಸಂಘರ್ಷ ತಾರಕಕ್ಕೇರಿದೆ.
ಸೋಲಿನ ಮುಖಭಂಗ: ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಗಡಿಯೊಳಗೆ ನುಗ್ಗಿ ಹಲವು ಬಾರಿ ವಾಯುದಾಳಿ (Air Strikes) ನಡೆಸಿದೆ. ಆದರೆ, ಪ್ರತಿ ಬಾರಿಯೂ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಸೈನಿಕರನ್ನು ಗಡಿಯಿಂದ ಹಿಂದೆ ಸರಿಯುವಂತೆ ಮಾಡಿವೆ. ಗಡಿ ಭಾಗದ ಹಲವು ಸೇನಾ ಚೌಕಿಗಳನ್ನು ಅಫ್ಘಾನಿಸ್ತಾನ ಧ್ವಂಸಗೊಳಿಸಿದ್ದು, ಪಾಕಿಸ್ತಾನ ಇಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ.

2. ಇರಾನ್ ಜೊತೆ ಯುದ್ಧದ ಪರಿಸ್ಥಿತಿ

ಪಾಕಿಸ್ತಾನದ ಮತ್ತೊಂದು ನೆರೆ ರಾಷ್ಟ್ರ ಇರಾನ್. ಇತ್ತೀಚಿನ ವರ್ಷಗಳಲ್ಲಿ ಇರಾನ್ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸಲ್ಪ ಚೆನ್ನಾಗಿದೆ. ಆದರೆ, ಕೆಲ ವರ್ಷಗಳ ಹಿಂದೆ ಬಲೂಚಿಸ್ತಾನ್ ಗಡಿ ಭಾಗದಲ್ಲಿ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆಗಳ ನೆಪದಲ್ಲಿ ಇವೆರಡೂ ದೇಶಗಳು ಪರಸ್ಪರ ಬಾಂಬ್ ದಾಳಿ ನಡೆಸಿಕೊಂಡಿವೆ. ಇರಾನ್ ಸೇನೆಯು ಕ್ಷಿಪಣಿಗಳ ಮೂಲಕ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದಾಗ, ಪಾಕಿಸ್ತಾನಕ್ಕೆ ಅದನ್ನು ತಡೆಯಲು ಸಾಧ್ಯವಾಗದೆ ಭಾರೀ ಮುಖಭಂಗವಾಗಿತ್ತು.

3. ಜೋರ್ಡಾನ್ ದೇಶದಲ್ಲಿ ಅತಿ ದೊಡ್ಡ ರಕ್ತಪಾತ!

ಇದು ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಕಪ್ಪು ಚುಕ್ಕೆ ಎನ್ನಬಹುದಾದ ಘಟನೆ. 1970 ರಲ್ಲಿ ಜೋರ್ಡಾನ್ ದೇಶದಲ್ಲಿ ಆಂತರಿಕ ಕಲಹ ಏರ್ಪಟ್ಟಿತ್ತು. ಆಗ ಜೋರ್ಡಾನ್ ರಾಜನಿಗೆ ಬೆಂಬಲ ನೀಡಲು ಹೋದ ಪಾಕಿಸ್ತಾನ ಸೇನೆಯು, ಅಲ್ಲಿನ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಮೇಲೆ ಭೀಕರ ದಾಳಿ ನಡೆಸಿತ್ತು. ಇದನ್ನು 'ಬ್ಲ್ಯಾಕ್ ಸೆಪ್ಟೆಂಬರ್' ಎಂದು ಕರೆಯಲಾಗುತ್ತದೆ. ಈ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಅವಮಾನ ಹಾಗೂ ರಾಜತಾಂತ್ರಿಕ ಸೋಲಾಗಿತ್ತು.
ಪಾಕಿಸ್ತಾನವು ತನ್ನ ನೆರೆಹೊರೆಯ ಯಾವುದೇ ದೇಶದೊಂದಿಗೂ ಉತ್ತಮ ಸಂಬಂಧವನ್ನು ಹೊಂದಿಲ್ಲ. ಭಾರತದ ವಿರುದ್ಧ ಕಾರ್ಗಿಲ್ ಸೇರಿದಂತೆ ಎಲ್ಲಾ ಯುದ್ಧಗಳಲ್ಲಿ ಸೋತಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ಗಡಿ ಸಂಘರ್ಷದಲ್ಲೂ ಸದಾ ಹಿನ್ನಡೆಯನ್ನೇ ಅನುಭವಿಸುತ್ತಾ ಬಂದಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net