ಅಮೆರಿಕಾಗಿಂತ ನನ್ನ ದೇಶವೆ ಬೆಸ್ಟ್​...ಅನಿವಾಸಿ ಭಾರತೀಯಳಿಂದ ರಾಷ್ಟ್ರದ ಗುಣಗಾನ! ವಿಡಿಯೋ ವೈರಲ್​ Vibe And Warmth

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ವಾಷಿಂಗ್ಟನ್: ಅಮೆರಿಕಾದಲ್ಲಿ ನೆಲೆಸಿರುವ ಭಾರತ ಮೂಲದ ಮಹಿಳೆಯೊಬ್ಬರು ಭಾರತೀಯ ಜೀವನದ ಅತ್ಯಮೂಲ್ಯ ಅಂಶಗಳನ್ನು ಎತ್ತಿ ತೋರಿಸಿದ್ದು, ಈ ಅಂಶಗಳನ್ನು ಪಾಶ್ಚಾತ್ಯ ದೇಶಗಳಲ್ಲಿ ಕಲ್ಪಿಸಿಕೊಳ್ಳಲು (Vibe And Warmth) ಸಾಧ್ಯವೇ? ಎಂದು ಪ್ರಶ್ನಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಇದೀಗ ಫುಲ್​ ವೈರಲ್​ ಆಗಿದೆ.
ಸಾಮಾಜಿಕ ಜಾಲತಾಣ ಬಳಕೆದಾರ ಚಿನ್ಮಯಿ ಶರ್ಮಾ ತಮ್ಮ ವೀಡಿಯೋದಲ್ಲಿ ಭಾರತದ ಒಲವು, ಸ್ಪೂರ್ತಿಯ ಬಗ್ಗೆ ಮನಮೋಹಕವಾಗಿ ಮಾತನಾಡಿದ್ದಾರೆ. ಅಮೆರಿಕಾದ ಮೌನ ರಸ್ತೆಗಳು ಮತ್ತು ನಿಗದಿತ ಸ್ನೇಹಗಳ ನಡುವೆ, ಭಾರತದ ಡೆಲಿವರಿ ಸಿಸ್ಟಮ್‌ನ ವೇಗ, ರಸ್ತೆ ಬದಿಯಲ್ಲಿ ಸಿಗುವ ರುಚಿಯಾದ ಆಹಾರ, ಹಬ್ಬಗಳ ಜೀವಂತತೆ, ಸಾಮಾಜಿಕ ಜೀವನದ ಸ್ವಾಭಾವಿಕತೆ ಇವೆಲ್ಲವೂ ಕೂತಲ್ಲಿಯೇ ಊಹಿಸಿಕೊಳ್ಳಬಹುದು. ಆದಾಗ್ಯೂ, ನಾವು ಕನಸುಗಳನ್ನು ಬೆನ್ನಟ್ಟಿ ಮುಂದೆ ಸಾಗಲು ಬಯಸುತ್ತೇವೆ. ಆದರೆ, ನಿಜ ಜೀವನಕ್ಕೆ ಭಾರತದಂತಹ ಜಾಗ ಮತ್ತೊಂದು ಇಲ್ಲ! ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಸಾರ್ವಜನಿಕ ಪ್ರತಿಕ್ರಿಯೆ ಮತ್ತು ಚರ್ಚೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಮಿಶ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾಜಿಕ ಉಷ್ಣತೆ ಮತ್ತು ಅನುಕೂಲತೆಯ ಕೊರತೆಯ ಬಗ್ಗೆ ಅವರ ಭಾವನೆಗಳನ್ನು ಹಂಚಿಕೊಂಡರು. ಹಾಗೇ ಮಾಲಿನ್ಯ, ಮೂಲಸೌಕರ್ಯ ಸಮಸ್ಯೆಗಳು ಮತ್ತು ಹೆಚ್ಚಿನ ವೆಚ್ಚಗಳಂತಹ ಭಾರತದ ಮಹತ್ವದ ಸವಾಲುಗಳನ್ನು ಅವರು ನಿರ್ಲಕ್ಷಿಸುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.
ಒಬ್ಬ ಬಳಕೆದಾರರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದು, ಚೆನ್ನಾಗಿ ಹೇಳಿದ್ದೀರಿ! ಭಾರತವೇ ಶ್ರೇಷ್ಠ! ವಿದೇಶದಲ್ಲಿ ಉಳಿಯುವುದರಿಂದ ನಿಮಗೆ ಅದು ಹೆಚ್ಚು ಅರಿವಾಗುತ್ತದೆ!! ಭಾರತೀಯರಾಗಿರಲು ನಮಗೆ ಹೆಮ್ಮೆ ಇದೆ! ಎಂದು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರ, ದೂರು ಹೇಳುವುದಕ್ಕೆ ಅಂತ್ಯವಿಲ್ಲ. ನೀವು ಆ ದೇಶದಲ್ಲಿಯೇ ಇರಲು ಆಯ್ಕೆ ಮಾಡಿಕೊಂಡಿದ್ದರೆ, ಸುಮ್ಮನೆ ಅವರ ಜೀವನದ ವಿಧಾನವನ್ನು ಅಳವಡಿಸಿಕೊಂಡು, ನಿಮಗೆ ಸಿಕ್ಕಿದ್ದನ್ನು ಹೇಗೆ ಬಳಸಿಕೊಳ್ಳಬೇಕೆಂದು ಕಲಿಯಿರಿ. ನೀವು ಭಾರತವನ್ನು ಅಷ್ಟೊಂದು ಪ್ರೀತಿಸುತ್ತಿದ್ದರೆ, ಆ ದೇಶದಿಂದ ಹೊರಬಂದು ನಿಮ್ಮ ಊರಿಗೆ ಮರಳಿ ಬನ್ನಿ ಎಂದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net