ಲಂಡನ್/ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆ (AI) ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಮನುಷ್ಯರ ಕೆಲಸಗಳನ್ನು ರೋಬೋಟ್‌ಗಳು ಮತ್ತು ಸಾಫ್ಟ್‌ವೇರ್‌ಗಳು ಕಸಿದುಕೊಳ್ಳಲಿವೆಯೇ ಎಂಬ ಆತಂಕ ಜಗತ್ತಿನಾದ್ಯಂತ ಮನೆಮಾಡಿದೆ. ಈ ಕುರಿತು ಅಚ್ಚರಿಯ ಹೇಳಿಕೆ ನೀಡಿರುವ ಟೆಸ್ಲಾ ಮತ್ತು ಎಕ್ಸ್ (ಟ್ವಿಟರ್) ಮುಖ್ಯಸ್ಥ ಎಲೋನ್ ಮಸ್ಕ್, "ಭವಿಷ್ಯದಲ್ಲಿ ಯಾರಿಗೂ ಉದ್ಯೋಗದ ಅಗತ್ಯವೇ ಇರುವುದಿಲ್ಲ" ಎಂದು ಭವಿಷ್ಯ ನುಡಿದಿದ್ದಾರೆ.