ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯಿಂದ ವಿಕೃತ ಕೃತ್ಯ: ಮಸಾಜ್ ನೆಪದಲ್ಲಿ 61 ಮಹಿಳೆಯರ ಮೇಲೆ ದೌರ್ಜನ್ಯ! Sumit Satish Rastogi

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯಿಂದ ವಿಕೃತ ಕೃತ್ಯ: ಮಸಾಜ್ ನೆಪದಲ್ಲಿ 61 ಮಹಿಳೆಯರ ಮೇಲೆ ದೌರ್ಜನ್ಯ! Sumit Satish Rastogi
ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯಿಂದ ವಿಕೃತ ಕೃತ್ಯ: ಮಸಾಜ್ ನೆಪದಲ್ಲಿ 61 ಮಹಿಳೆಯರ ಮೇಲೆ ದೌರ್ಜನ್ಯ! Sumit Satish Rastogi
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಟ್ರೇಲಿಯಾದಲ್ಲಿ 61 ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ ರಹಸ್ಯ ವಿಡಿಯೋ ಮಾಡಿದ ಭಾರತೀಯ ಮೂಲದ ಸುಮಿತ್‌ಗೆ 14 ವರ್ಷ ಜೈಲು
  • ಮಸಾಜ್ ಥೆರಪಿಯಲ್ಲಿ ಯಾವುದೇ ಔಪಚಾರಿಕ ಶಿಕ್ಷಣ ಅಥವಾ ಅರ್ಹತೆ ಇಲ್ಲದಿದ್ದರೂ ಅಡಿಲೇಡ್‌ನ ಪಾರ್ಲರ್‌ನಲ್ಲಿ ಕೆಲಸ
  • ನ್ಯಾಯಾಲಯದ ವಿಚಾರಣೆ ವೇಳೆ ತನ್ನ ಮೇಲಿದ್ದ 97 ಅಪರಾಧಗಳನ್ನು ಒಪ್ಪಿಕೊಂಡ ಸುಮಿತ್ ಸತೀಶ್ ರಾಸ್ತೋಗಿ
  • ಆರೋಪಿಗೆ 'ವಾಯೂರಿಸ್ಟಿಕ್ ಡಿಸಾರ್ಡರ್' ಇರುವುದು ದೃಢಪಟ್ಟಿದ್ದು, ಸಂತ್ರಸ್ತರು ಆತನ ಕ್ಷಮೆಯನ್ನು ತಿರಸ್ಕರಿಸಿದ್ದಾರೆ
Sumit Satish Rastogi : ಮಹಾರಾಷ್ಟ್ರದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಂಚಕ ಅಶೋಕ್ ಖಾರತ್ ಪ್ರಕರಣ ಮಾಸುವ ಮುನ್ನವೇ, ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬನ ಇಂತಹುದೇ ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲಿ ಸುಮಾರು 61 ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ 39 ವರ್ಷದ ಭಾರತೀಯ ಮೂಲದ ಮಸಾಜ್ ಥೆರಪಿಸ್ಟ್ ಸುಮಿತ್ ಸತೀಶ್ ರಾಸ್ತೋಗಿ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಚಿಕಿತ್ಸೆಯ ನೆಪದಲ್ಲಿ ಬರುತ್ತಿದ್ದ ಮಹಿಳೆಯರ ರಹಸ್ಯ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದ ಈ ವಿಕೃತಕಾಮಿಗೆ ಅಲ್ಲಿನ ನ್ಯಾಯಾಲಯವು 13 ವರ್ಷ 10 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಮೂಲತಃ ದೆಹಲಿಯವರಾದ ಸುಮಿತ್ ರಾಸ್ತೋಗಿ 2011ರಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದು, ಅಡಿಲೇಡ್‌ನ ಮಸಾಜ್ ಪಾರ್ಲರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಮಸಾಜ್ ಥೆರಪಿಯಲ್ಲಿ ಯಾವುದೇ ಔಪಚಾರಿಕ ಶಿಕ್ಷಣ ಅಥವಾ ಅರ್ಹತೆ ಇಲ್ಲದಿದ್ದರೂ ಅವರು ಈ ಕೆಲಸ ಮಾಡುತ್ತಿದ್ದರು ಎಂಬುದು ಆಘಾತಕಾರಿ ವಿಷಯವಾಗಿದೆ.
ಅಕ್ಟೋಬರ್ 2021 ರಿಂದ ಜುಲೈ 2022 ರವರೆಗಿನ ಕೇವಲ 9 ತಿಂಗಳ ಅವಧಿಯಲ್ಲಿ, ಪಾರ್ಲರ್‌ಗೆ ಭೇಟಿ ನೀಡುತ್ತಿದ್ದ ಮಹಿಳೆಯರಿಗೆ ರಾಸ್ತೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರಂಭದಲ್ಲಿ ಸಣ್ಣದಾಗಿ ಕಂಡುಬಂದ ಅವರ ವಿಕೃತ ಕೃತ್ಯಗಳು ಕ್ರಮೇಣ ಹೆಚ್ಚಾಗತೊಡಗಿದವು, ಮಹಿಳೆಯರ ಒಳ ಉಡುಪುಗಳನ್ನು ಮುಟ್ಟುವುದು ಹಾಗೂ ಅವರ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳನ್ನು ರಹಸ್ಯವಾಗಿ ಕದಿಯಲು ಆರಂಭಿಸಿದನು. ಅಂತಿಮವಾಗಿ ಆತನನ್ನು 2022ರ ಜುಲೈ ತಿಂಗಳಲ್ಲಿ ಪೊಲೀಸರು ಬಂಧಿಸಿದರು.
ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ದಕ್ಷಿಣ ಆಸ್ಟ್ರೇಲಿಯಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕಾರ್ಮೆನ್ ಮಾಟಿಯೊ, ಸುಮಿತ್ ಎಸಗಿದ ಕೃತ್ಯದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನೀವು ಮಹಿಳೆಯರ ಸುರಕ್ಷತೆ ಮತ್ತು ನಂಬಿಕೆಯನ್ನು ಕ್ರೂರವಾಗಿ ಬಳಸಿಕೊಂಡಿದ್ದೀರಿ ಎಂದು ನ್ಯಾಯಾಧೀಶರು ಖಂಡಿಸಿದರು.
ಇನ್ನು ಆರೋಪಿ ಸುಮಿತ್, ನ್ಯಾಯಾಲಯದಲ್ಲಿ ತನ್ನ 97 ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಇದರಲ್ಲಿ 55 ವಿಡಿಯೋಗಳನ್ನು ಕದ್ದ ಆರೋಪಗಳು ಮತ್ತು 42 ತೀವ್ರ ಲೈಂಗಿಕ ದೌರ್ಜನ್ಯದ ಆರೋಪಗಳು ಸೇರಿವೆ. ನ್ಯಾಯಾಲಯವು ರಾಸ್ತೋಗಿಗೆ ಸುಮಾರು 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಶಿಕ್ಷೆ ಅನುಭವಿಸಿದ ನಂತರ ಆತ ಆಸ್ಟ್ರೇಲಿಯಾದಿಂದ ಗಡೀಪಾರುಗೊಳ್ಳುವ ಸಾಧ್ಯತೆ ಇದೆ.

ಹನಿಮೂನ್​ಗೆ ಹೋದ ಮಹಿಳೆಗೆ ಕರಾಳ ಅನುಭವ

ಅಂದಹಾಗೆ, ಈ ಘೋರ ಕೃತ್ಯವು ಅನೇಕ ಮಹಿಳೆಯರಿಗೆ ತೀವ್ರವಾದ ಮಾನಸಿಕ ಆಘಾತವನ್ನು ಉಂಟುಮಾಡಿದೆ. ಈ ಕುರಿತು ಸಂತ್ರಸ್ತೆಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು, "ನಾನು ನನ್ನ ಹನಿಮೂನ್ ವೀಕೆಂಡ್ ಪ್ರವಾಸದ ಭಾಗವಾಗಿ ಅಲ್ಲಿಗೆ ಹೋಗಿದ್ದೆ. ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣಗಳು ಈ ಘಟನೆಯಿಂದಾಗಿ ಅತ್ಯಂತ ಭಯಾನಕ ನೆನಪಾಗಿ ಮಾರ್ಪಟ್ಟವು. ಈಗ ನನಗೆ ಯಾವುದೇ ಪುರುಷ ವೈದ್ಯರು ಅಥವಾ ಫಿಸಿಯೋಥೆರಪಿಸ್ಟ್‌ಗಳನ್ನು ನಂಬುವುದು ಕಷ್ಟಕರವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಮನೋವೈದ್ಯರು ನ್ಯಾಯಾಲಯಕ್ಕೆ ಸುಮಿತ್‌ಗೆ ವಾಯೂರಿಸ್ಟಿಕ್ ಡಿಸಾರ್ಡರ್ ಎಂಬ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಿದರು. ಈ ಅನಾರೋಗ್ಯದಲ್ಲಿ, ಒಬ್ಬ ವ್ಯಕ್ತಿಯು ಅರಿವಿಲ್ಲದೆ ಭಾಗಶಃ ಬಟ್ಟೆ ಧರಿಸಿದ ಮಹಿಳೆಯರನ್ನು ನೋಡುವುದರಿಂದ ಲೈಂಗಿಕ ಆನಂದವನ್ನು ಪಡೆಯುತ್ತಾನೆ. ಆದಾಗ್ಯೂ, ಈ ಅನಾರೋಗ್ಯವು ಅವನ ಅಪರಾಧವನ್ನು ಕಡಿಮೆ ಮಾಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಮತ್ತೊಂದೆಡೆ, ಬಲಿಪಶು ಮಹಿಳೆಯರು ಸುಮಿತ್ ಕೋರಿದ ಕ್ಷಮೆಯಾಚನೆಯನ್ನು ತಿರಸ್ಕರಿಸಿದರು, ಈ ಕ್ಷಮೆಯಾಚನೆ ಕೇವಲ ನಾಟಕ ಎಂದು ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net