ಟೆಲ್ ಅವಿವ್: ಮಧ್ಯಪ್ರಾಚ್ಯದ ಸಂಘರ್ಷದ ಕಿಚ್ಚಿನ ನಡುವೆಯೇ, ದಕ್ಷಿಣ ಅಮೆರಿಕಾದ ಪ್ರಬಲ ರಾಷ್ಟ್ರ ಅರ್ಜೆಂಟೀನಾ ಮತ್ತು ಇಸ್ರೇಲ್ ನಡುವೆ ಐಸಾಕ್ ಒಪ್ಪಂದ (Israel-Argentina Isaac) ಏರ್ಪಟ್ಟಿದೆ. ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೈ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೆರುಸಲೆಮ್‌ನಲ್ಲಿ ಭೇಟಿಯಾಗಿ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ಮೈತ್ರಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.