ಭಾರತ ಮತ್ತು ನಮ್ಮ ನಡುವೆ ಈಗಾಗಲೇ ಒಪ್ಪಂದವಾಗಿರುವ ಹಿನ್ನೆಲೆಯಲ್ಲಿ ಭಾರತವು ಇರಾನಿನಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿ, ವೆನೆಜುವೆಲಾದ ಕಚ್ಚಾ ತೈಲವನ್ನು ಖರೀದಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಿಂದ ಫ್ಲೋರಿಡಾಕ್ಕೆ ಹೋಗುತ್ತಿರುವಾಗ ಮಾರ್ಗಮಧ್ಯೆ ಟ್ರಂಪ್ ಸುದ್ದಿಗಾರರೊಂದಿಗೆ, ತಮ್ಮ ಹಾಗೂ ಭಾರತ್ ನಡುವಿನ ಒಪ್ಪಂದದ ಬಗ್ಗೆ ಮಾತನಾಡಿದ್ದಾರೆ.