ಕಾಬೂಲ್ ಬೆನ್ನಿಗೆ ನಿಂತ ನವದೆಹಲಿ; ಪಾಕಿಸ್ತಾನಕ್ಕೆ ಶುರುವಾಯ್ತು ನಡುಕ: ನೆರೆರಾಷ್ಟ್ರದ ಏರ್ ಸ್ಟ್ರೈಕ್​ಗೆ ಭಾರತ ಕೊಟ್ಟ ತಿರುಗೇಟು ಏನು..? India Support Afghanistan

ಕಾಬೂಲ್ ಬೆನ್ನಿಗೆ ನಿಂತ ನವದೆಹಲಿ; ಪಾಕಿಸ್ತಾನಕ್ಕೆ ಶುರುವಾಯ್ತು ನಡುಕ: ನೆರೆರಾಷ್ಟ್ರದ ಏರ್ ಸ್ಟ್ರೈಕ್​ಗೆ ಭಾರತ ಕೊಟ್ಟ ತಿರುಗೇಟು ಏನು..?
ಕಾಬೂಲ್ ಬೆನ್ನಿಗೆ ನಿಂತ ನವದೆಹಲಿ; ಪಾಕಿಸ್ತಾನಕ್ಕೆ ಶುರುವಾಯ್ತು ನಡುಕ: ನೆರೆರಾಷ್ಟ್ರದ ಏರ್ ಸ್ಟ್ರೈಕ್​ಗೆ ಭಾರತ ಕೊಟ್ಟ ತಿರುಗೇಟು ಏನು..?
Published on
ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ(India Support Afghanistan) ತೀವ್ರವಾಗಿ ಖಂಡಿಸಿದೆ. ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಭಾರತವು ಬಹಿರಂಗವಾಗಿಯೇ ಕಾಬೂಲ್ ಪರವಾಗಿ ಬ್ಯಾಟ್ ಬೀಸಿದೆ. ಈ ಬೆಳವಣಿಗೆಯು ದಕ್ಷಿಣ ಏಷ್ಯಾದಲ್ಲಿ ಹೊಸ ರಾಜತಾಂತ್ರಿಕ ಸಮರಕ್ಕೆ ನಾಂದಿ ಹಾಡಿದೆ.

ಭಾರತದ ವಿದೇಶಾಂಗ ಇಲಾಖೆಯ ಖಡಕ್ ಎಚ್ಚರಿಕೆ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ, ಪಾಕಿಸ್ತಾನದ ಕೃತ್ಯವನ್ನು ಕಟುವಾಗಿ ಟೀಕಿಸಿದ್ದಾರೆ. ಯಾವುದೇ ರಾಷ್ಟ್ರವು ಮತ್ತೊಂದು ದೇಶದ ಗಡಿ ನಿಯಮಗಳನ್ನು ಉಲ್ಲಂಘಿಸಿ ದಾಳಿ ಮಾಡುವುದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅಫ್ಘಾನ್ ನೆಲದಲ್ಲಿ ಅಮಾಯಕ ನಾಗರಿಕರ ಸಾವು ನೋವು ಸಂಭವಿಸಿರುವುದು ವಿಷಾದನೀಯ. ನಾವು ಅಫ್ಘಾನಿಸ್ತಾನದ ಸಾರ್ವಭೌಮತ್ವವನ್ನು ಬೆಂಬಲಿಸುತ್ತೇವೆ ಎಂದು ಭಾರತ ಹೇಳಿದೆ.
ಕಾಬೂಲ್ ಬೆನ್ನಿಗೆ ನಿಂತ ಭಾರತ - ಪಾಕಿಸ್ತಾನಕ್ಕೆ ಮುಜುಗರ
ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ಮಾಡಿದ ನಂತರ ತಾಲಿಬಾನ್ ಸರ್ಕಾರವು ಸೇಡಿನ ಎಚ್ಚರಿಕೆ ನೀಡಿತ್ತು. ಈಗ ಭಾರತವು ಅಧಿಕೃತವಾಗಿ ಅಫ್ಘಾನಿಸ್ತಾನಕ್ಕೆ ಬೆಂಬಲ ಘೋಷಿಸಿರುವುದು ಪಾಕಿಸ್ತಾನವನ್ನು ಜಾಗತಿಕ ವೇದಿಕೆಯಲ್ಲಿ ಏಕಾಂಗಿಯಾಗಿಸಿದೆ. ಭಯೋತ್ಪಾದನೆಯ ಹೆಸರಿನಲ್ಲಿ ನೆರೆಯ ದೇಶಗಳ ಮೇಲೆ ದಾಳಿ ಮಾಡುವುದು ಪಾಕಿಸ್ತಾನದ ಹಳೆಯ ಚಾಳಿ ಎಂದು ಭಾರತ ಪರೋಕ್ಷವಾಗಿ ಕಿಚಾಯಿಸಿದೆ.

ಏನಿದು ಘಟನೆ..?

ಪಾಕಿಸ್ತಾನವು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದರು. ಈ ದಾಳಿಯನ್ನು ಅಫ್ಘಾನಿಸ್ತಾನವು ಆಕ್ರಮಣಕಾರಿ ನಡೆ ಎಂದು ಕರೆದಿದ್ದು, ಪಾಕಿಸ್ತಾನದ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿತ್ತು.

ರಾಜತಾಂತ್ರಿಕ ಲೆಕ್ಕಾಚಾರ

ಭಾರತವು ಯಾವಾಗಲೂ ಅಫ್ಘಾನ್ ಜನರ ಹಿತಾಸಕ್ತಿಯ ಪರವಾಗಿಯೇ ಇದೆ. ಈ ಬಾರಿ ತಾಲಿಬಾನ್ ಆಡಳಿತವಿದ್ದರೂ, ದೇಶದ ಸಾರ್ವಭೌಮತ್ವದ ವಿಚಾರ ಬಂದಾಗ ಭಾರತವು ತತ್ವಬದ್ಧ ನಿಲುವನ್ನು ತೆಗೆದುಕೊಂಡಿದೆ. ಇದು ಪಾಕಿಸ್ತಾನಕ್ಕೆ ನೀಡಿದ ಬಲವಾದ ರಾಜತಾಂತ್ರಿಕ ಹೊಡೆತ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net