'ನಮ್ಮ ಜೊತೆ ಭಾರತವಿದೆ': ಜೆಡಿ ವ್ಯಾನ್ಸ್​ ಸೊಕ್ಕಿನ​ ಮಾತಿಗೆ ಇಸ್ರೇಲಿ ಪ್ರಧಾನಿ ಖಡಕ್ ತಿರುಗೇಟು | Netanyahu

ಜೆಡಿ ವ್ಯಾನ್ಸ್​ ಸೊಕ್ಕಿನ​ ಮಾತಿಗೆ ಇಸ್ರೇಲಿ ಪ್ರಧಾನಿ ಖಡಕ್ ತಿರುಗೇಟು
ಜೆಡಿ ವ್ಯಾನ್ಸ್​ ಸೊಕ್ಕಿನ​ ಮಾತಿಗೆ ಇಸ್ರೇಲಿ ಪ್ರಧಾನಿ ಖಡಕ್ ತಿರುಗೇಟು
Published on

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್‌ಗೆ ಜಗತ್ತಿನಲ್ಲಿ ಅಮೆರಿಕ ಬಿಟ್ಟರೆ ತುಂಬುವ ಮಿತ್ರ ಇನ್ನೊಂದಿಲ್ಲ ಹೇಳಿಕೆ
  • ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆಗೆ ಇಸ್ರೇಲಿ ಪ್ರಧಾನಿ ತಿರುಗೇಟು
ಟೆಲ್ ಅವಿವ್: ಇಸ್ರೇಲ್‌ಗೆ ಜಗತ್ತಿನಲ್ಲಿ ಅಮೆರಿಕವನ್ನು ಬಿಟ್ಟರೆ ಇನ್ಯಾವ ಶಕ್ತಿ ತುಂಬುವ ಮಿತ್ರ ದೇಶವಿಲ್ಲ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಟ್ಟ ಖಡಕ್ ಉತ್ತರ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅಮೆರಿಕ ಬಿಟ್ಟರೆ ಮತ್ತೊಂದು ಶಕ್ತಿಶಾಲಿ ರಾಷ್ಟ್ರ ಇಸ್ರೇಲ್​ ಜೊತೆಗಿಲ್ಲ ಎಂಬ ಜೆಡಿ ವ್ಯಾನ್ಸ್ ಹೇಳಿಕೆಯಿಂದ ಸಿಟ್ಟಾದ ನೆತನ್ಯಾಹು, ನಮ್ಮ ಜೊತೆ ಭಾರತವಿದೆ ಎಂದರು. ಇಸ್ರೇಲ್‌ನ ಅತ್ಯಂತ ದೊಡ್ಡ ಬೆಂಬಲಿಗ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು ಎಂದ ಇಸ್ರೇಲಿ ಪ್ರಧಾನಿ, ವಿಶ್ವವ್ಯಾಪಿ ನಮಗೆ ಇನ್ನೂ ಹಲವು ಮಿತ್ರರಿದ್ದಾರೆ ಎಂದು ಗುಡುಗಿದರು.
'ಫಾಕ್ಸ್ ನ್ಯೂಸ್‌'ಗೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ನಮಗೆ ಜಗತ್ತಿನಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಭಾರತ. 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬೃಹತ್ ರಾಷ್ಟ್ರ ನಮ್ಮ ಪರವಾಗಿದೆ. ಅಲ್ಲಿಂದ ನಮಗೆ ಸಿಗುತ್ತಿರುವ ಬೆಂಬಲ ಅಸಾಧಾರಣ" ಎಂದು ಸಂತಸ ವ್ಯಕ್ತಪಡಿಸಿದರು.
"ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಹಾಗೆಯೇ, ಇಸ್ರೇಲ್ ಇತಿಹಾಸದಲ್ಲೇ ಡೊನಾಲ್ಡ್ ಟ್ರಂಪ್ ಶ್ವೇತಭವನ ಕಂಡ ಅತ್ಯುತ್ತಮ ಆಪ್ತ ಸ್ನೇಹಿತ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಂತ, ಇದರರ್ಥ ವ್ಯಾನ್ಸ್ ಹೇಳುವ ಪ್ರತಿಯೊಂದನ್ನೂ ನಾವು ಒಪ್ಪಲೇಬೇಕು ಎಂದೇನಿಲ್ಲ. ಈ ವ್ಯತ್ಯಾಸವನ್ನು ಇಲ್ಲಿ ನಾನು ಸ್ಪಷ್ಟಪಡಿಸಬೇಕಿತ್ತು" ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net