Nepal Floods: ನೇಪಾಳದಲ್ಲಿ ಸಂಭವಿಸಿದ ಹಠಾತ್ ಜಲಪ್ರಳಯಕ್ಕೆ ಇದೀಗ 600ಕ್ಕೂ ಹೆಚ್ಚು ಮಂದಿ ದುರಂತ ಸಾವಿಗೀಡಾಗಿದ್ದು, 3 ಸಾವಿರಕ್ಕೂ ಅಧಿಕ ಜನರು ಇನ್ನೂ ಮಿಸ್ಸಿಂಗ್ ಪಟ್ಟಿಯಲ್ಲಿದ್ದಾರೆ. ಪ್ರವಾಹದ ಭೀಕರತೆಗೆ ಅದೆಷ್ಟೋ ಬೃಹತ್ ಕಟ್ಟಡಗಳು, ಮನೆಗಳು ಧರೆಗೆ ಉರುಳಿ, ಸಾವಿರಾರು ಜನರ ಜೀವ ಮತ್ತು ಬದುಕುವ ಭರವಸೆಯನ್ನು ಕಸಿದುಕೊಂಡಿರುವುದು ನಿಜಕ್ಕೂ ಘೋರ ದುರಂತ. ಘಟನೆಗೆ ಸಂಬಂಧಿಸಿದಂತೆ ಹಲವಾರು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಒಂದು ದೃಶ್ಯ ಮಾತ್ರ ನೆಟ್ಟಿಗರನ್ನು ಭಾರಿ ಅಚ್ಚರಿಗೆ ದೂಡಿದೆ.