ನನ್ನ ಅಧ್ಯಕ್ಷರು... ಅಲ್ಲಲ್ಲ ನನ್ನ ಗಂಡ: ಮೊದಲ ಸುದ್ದಿಗೋಷ್ಠಿಯಲ್ಲೇ ಟ್ರಂಪ್ ಮಾಧ್ಯಮ ಕಾರ್ಯದರ್ಶಿ ಎಡವಟ್ಟು! | Katie Zacharia

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಮಾಧ್ಯಮ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ 41 ವರ್ಷ ವಯಸ್ಸಿನ ಕೇಟಿ ಜಕಾರಿ(Katie Zacharia), ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲೇ ಮಾತಿನಲ್ಲಿ ಪದೇ ಪದೇ ತಡವರಿಸಿ, ಅದನ್ನು ಹಠಾತ್ತನೆ ಮುಕ್ತಾಯಗೊಳಿಸುವ ಮೂಲಕ ಮುಜುಗರಕ್ಕೀಡಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಹೊಸ ಮಾಧ್ಯಮ ಕಾರ್ಯದರ್ಶಿ ಕೇಟಿ ಜಕಾರಿ ( Getty)
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಹೊಸ ಮಾಧ್ಯಮ ಕಾರ್ಯದರ್ಶಿ ಕೇಟಿ ಜಕಾರಿ ( Getty)
Published on: 

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಮಾಧ್ಯಮ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ 41 ವರ್ಷ ವಯಸ್ಸಿನ ಕೇಟಿ ಜಕಾರಿ(Katie Zacharia), ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲೇ ಮಾತಿನಲ್ಲಿ ಪದೇ ಪದೇ ತಡವರಿಸಿ, ಅದನ್ನು ಹಠಾತ್ತನೆ ಮುಕ್ತಾಯಗೊಳಿಸುವ ಮೂಲಕ ಮುಜುಗರಕ್ಕೀಡಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ, ಕೇವಲ 14 ನಿಮಿಷಗಳ ಕಾಲ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಟಿ, ಟ್ರಂಪ್ ಆಡಳಿತದ ಸಾಧನೆಗಳನ್ನು ವಿವರಿಸುವಾಗ ಹಲವಾರು ಬಾರಿ ತಡವರಿಸಿದ್ದಾರೆ. ಆರಂಭದಲ್ಲೇ ತಮಗೆ ಈ ಜವಾಬ್ದಾರಿ ನೀಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ಅಧ್ಯಕ್ಷ ಟ್ರಂಪ್ ಅವರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಹೆಮ್ಮೆಯಿದೆ, ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಧನ್ಯವಾದಗಳು, ಬಹಳ ಕಾಲದಿಂದ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ ಎಂದು ಉತ್ಸಾಹದಿಂದ ನುಡಿಯುತ್ತಲೇ ಮುಜುಗರದ ಕ್ಷಣಗಳನ್ನು ಎದುರಿಸಿದ್ದಾರೆ.

ಡೈಲಿ ಮೇಲ್ ವರದಿಗಾರರೊಬ್ಬರು ಜಕಾರಿ ಅವರನ್ನು, ತಮ್ಮ ಮಕ್ಕಳಿಗಾಗಿ ಸಮಯ ಮಾಡಿಕೊಳ್ಳುತ್ತಾ ಈ ಅತ್ಯಂತ ಒತ್ತಡದ ಕೆಲಸವನ್ನು ಹೇಗೆ ನಿರ್ವಹಿಸಲು ಯೋಜಿಸಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಕಾರಿ ಡೊನಾಲ್ಡ್ ಟ್ರಂಪ್ ಅವರನ್ನು ತಮ್ಮ ಗಂಡನೊಂದಿಗೆ ಹೋಲಿಸಿಬಿಟ್ಟರು. ನನ್ನ ಅಧ್ಯಕ್ಷರು... ಅಯ್ಯೋ ಕ್ಷಮಿಸಿ, ನನ್ನ ಗಂಡ ಎಂದು ಹೇಳಿದರು.

ಇದನ್ನೂ ಓದಿ:ಆರಂಭಿಸಿದ್ದು ಸ್ಟಾಲಿನ್, ವೈರಲ್ ಮಾಡಿದ್ದು ವಿಜಯ್: ಈ ಸಿಂಪಲ್ ಕೈಸನ್ನೆಯನ್ನು ಡಿಎಂಕೆ ಈಗ ಆರ್‌ಎಸ್‌ಎಸ್ ಪ್ರಣಾಮ ಎನ್ನುತ್ತಿರುವುದೇಕೆ..? | Hand Gesture

ನಾನು ಸರ್ಕಾರದ ಹೊರಗಿದ್ದಾಗ ಏನು ಮಾಡುತ್ತಿದ್ದೆನೋ, ಅದನ್ನೇ ಮಾಡಲು ಈಗ ನನಗೆ ಅವಕಾಶ ಸಿಕ್ಕಿದೆ. ಅಮೆರಿಕದ ಜನರಿಗಾಗಿ ಅಧ್ಯಕ್ಷ ಟ್ರಂಪ್ ಅವರು ಹಮ್ಮಿಕೊಂಡಿರುವ ಅದ್ಭುತ ಕೆಲಸಗಳು ಮತ್ತು ಯೋಜನೆಗಳನ್ನು ಎಲ್ಲರಿಗೂ ತಲುಪಿಸುವುದು, ಹೆಚ್ಚಿಸುವುದು ಹಾಗೂ ವಿಸ್ತರಿಸುವುದೇ ನನ್ನ ಮುಖ್ಯ ಆಶಯವಾಗಿದೆ ಎಂದು ಅವರು ಹೇಳಿದರು. ಇನ್ನು ಟ್ರಂಪ್ ಆಡಳಿತದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರುವ ಬ್ರೈಟ್‌ಬಾರ್ಟ್ ನ್ಯೂಸ್ ಎಂಬ ಬಲಪಂಥೀಯ ಮಾಧ್ಯಮ ಸಂಸ್ಥೆಯಿಂದ ಅವರು ತಮ್ಮ ಮೊದಲ ಪ್ರಶ್ನೆಯನ್ನು ತೆಗೆದುಕೊಂಡರು.

ಶ್ವೇತಭವನದ ಸುದ್ದಿಗೋಷ್ಠಿಗಳಿಗೆ ಮತ್ತು ಮಾಧ್ಯಮ ಬಳಗಕ್ಕೆ ಇನ್ನಷ್ಟು ಹೊಸ ಮಾಧ್ಯಮ ಸಂಸ್ಥೆಗಳನ್ನು ಕರೆತರಲು, ತಮಗಿಂತ ಮುಂಚಿದ್ದವರು ಶುರುಮಾಡಿದ್ದ ಹೊಸ ಮಾಧ್ಯಮ ರೊಟೇಷನ್ ಪದ್ಧತಿಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು. ಹೊಸ ಮಾಧ್ಯಮ ಕಾರ್ಯದರ್ಶಿ ಕೇವಲ ಮೂರು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ, ತಕ್ಷಣವೇ ಸುದ್ದಿಗೋಷ್ಠಿ ಮುಗಿಸಿದರು.

Also Read
ಅಖಿಲೇಶ್‌ಗೆ ಶಾಕ್ ಕೊಟ್ಟ ಬಂಡಾಯ ಶಾಸಕರು ಬಿಜೆಪಿ ಪಾಳಯಕ್ಕೆ...ಈ ಅಸಮಾಧಾನ ಇಂದು ನಿನ್ನೆದಲ್ಲ! | SP MLAs Join BJP
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಹೊಸ ಮಾಧ್ಯಮ ಕಾರ್ಯದರ್ಶಿ ಕೇಟಿ ಜಕಾರಿ ( Getty)

ಹೊಸ ಮಾಧ್ಯಮ ಕಾರ್ಯದರ್ಶಿ ಬಗ್ಗೆ ಟ್ರಂಪ್ ಹೇಳಿದ್ದೇನು..?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾಧ್ಯಮ ಕಾರ್ಯದರ್ಶಿ ಜಕಾರಿ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಟ್ರಂಪ್ ಪ್ರಶಂಸೆ ವ್ಯಕ್ತಪಡಿಸಿದರು. ಜಕಾರಿ ಮೊದಲಿನಿಂದಲೂ ತಮಗೆ ತುಂಬಾ ನಿಷ್ಠಾವಂತೆ ಮತ್ತು ಬುದ್ಧಿವಂತೆಯಾಗಿದ್ದಾರೆ ಎಂದು ತಿಳಿಸಿದರು. ಜಕಾರಿ ಈ ವರ್ಷದ ಆರಂಭದಲ್ಲಿ ಗೃಹ ಇಲಾಖೆಯಲ್ಲಿ ಸ್ವಲ್ಪ ಕಾಲ ವಕ್ತಾರರಾಗಿ ಕೆಲಸ ಮಾಡಿದ್ದರು ಮತ್ತು ಫಾಕ್ಸ್ ನ್ಯೂಸ್ ಹಾಗೂ ನ್ಯೂಸ್‌ಮ್ಯಾಕ್ಸ್ ವಾಹಿನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಟ್ರಂಪ್ ವಿವರಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net