ಅಮೆರಿಕಾದಲ್ಲಿ ಮತ್ತಷ್ಟು ಎಪ್ಸ್ಟೀನ್​ ಫೈಲ್​ ಬಿಡುಗಡೆ; ಅಪ್ರಾಪ್ತಳ ಮೇಲೆ ಟ್ರಂಪ್​ & ಎಪ್ಸ್ಟೀನ್ ಹಲ್ಲೆ ಆರೋಪ | Epstein files

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಅಮೆರಿಕಾದಲ್ಲಿ ಎಪ್ಸ್ಟೀನ್ ಫೈಲ್ಸ್​​ ರಾದ್ದಾಂತ ಮುಂದುವರೆದಿದ್ದು, ಗುರುವಾರ(ಮಾ. 05) ಮತ್ತಷ್ಟು ಫೈಲ್​ಗಳನ್ನು ಯುಎಸ್​ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ್ದು, ಅದರಲ್ಲಿ ಅಪ್ರಾಪ್ತ ವಯಸ್ಕಳೊಬ್ಬಳ ಮೇಲೆ ಟ್ರಂಪ್ ಮತ್ತು ಮೃತ ಅಪರಾಧಿ ಎಪ್ಸ್ಟೀನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾಹಿತಿಗಳು ಹೊರ ಬಿದ್ದಿವೆ.
ಗುರುವಾರ ಬಿಡುಗಡೆಯಾದ ದಾಖಲೆಗಳಲ್ಲಿ 2019ರಲ್ಲಿ ಅಮೆರಿಕಾದ ಎಫ್‌ಬಿಐ ಅಧಿಕಾರಿಗಳೊಂದಿಗೆ ಮಹಿಳೆಯೊಬ್ಬರು ತಾನು 13 ರಿಂದ 15 ವರ್ಷದವಳಿದ್ದಾಗ ಜೆಫ್ರಿ ಎಪ್ಸ್ಟೀನ್ ಅವರಿಂದ ಪರಿಚಯಿಸಲ್ಪಟ್ಟ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜೊತೆಗೆ ಇಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ದಾಖಲೆಗಳನ್ನು ಬಿಡುಗಡೆಯಾಗಿವೆ.
ಎಫ್​ಬಿಐ ಅಧಿಕಾರಿಗಳ ಜೊತೆಗಿನ ಸಂದರ್ಶನದಲ್ಲಿ, ಎಪ್ಸ್ಟೀನ್ ತನ್ನನ್ನು ನ್ಯೂಯಾರ್ಕ್ ಅಥವಾ ನ್ಯೂಜೆರ್ಸಿಗೆ ಕರೆದೊಯ್ದು ಟ್ರಂಪ್‌ಗೆ ಪರಿಚಯಿಸಿದ ಎಂದು ಮಹಿಳೆ ಹೇಳಿದ್ದು, ಈ ವೇಳೆ ಟ್ರಂಪ್ ತನ್ನ ಮೇಲೆ ಮೌಖಿಕ ಸಂಭೋಗ ನಡೆಸಲು ಒತ್ತಾಯಿಸಿದ್ದರು. ಆದರೆ ನಾನು ಅವರನ್ನು ಕಚ್ಚಿದ್ದೆ. ಮತ್ತು ಈ ಕುರಿತು ಎಲ್ಲೂ ಬಾಯಿ ಬಿಡದಂತೆ ಸುಮ್ಮನಿರುವಂತೆ ನನಗೆ ಬೆದರಿಕೆ ಹಾಕಿದ್ದರು. ಹಲವು ವರ್ಷಗಳ ಕಾಲ ನನ್ನ ಆಪ್ತರಿಗೂ ಬೆದರಿಕೆ ಕರೆ ಬಂದಿವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಳೆ.
ಇನ್ನೂ ಎಪ್ಸ್ಟೀನ್ ಫೈಲ್ಸ್ ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಟ್ರಂಪ್, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ಈ ಹಿಂದೆ ಟ್ರಂಪ್ ವಿರುದ್ಧ ಬಿಡುಗಡೆಯಾದ ಕೆಲವು ದಾಖಲೆಗಳು ಸುಳ್ಳು ಎಂದು ನ್ಯಾಯಾಂಗ ಇಲಾಖೆ ಹೇಳಿತ್ತು. ಆದತೆ ಟ್ರಂಪ್ ಆಡಳಿತವು ಎಪ್ಸ್ಟೀನ್ ತನಿಖೆಯ ವಿವರಗಳನ್ನು ಮುಚ್ಚಿಹಾಕುತ್ತಿದೆ ಎಂದು ಡೆಮೋಕ್ರಾಟ್​​ ಪಕ್ಷ ಆರೋಪಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net