ಕ್ಷಣಾರ್ಧದಲ್ಲಿ ಸಾವಿನಿಂದ ಮೋಜ್ತಬಾ ಪಾರು! ಯುಎಸ್​-ಇಸ್ರೇಲಿ ಕಣ್ಣಿಂದ ಬಚಾವ್ ಆಗಿದ್ದೇ ಪವಾಡ; ಆಡಿಯೋ ಲೀಕ್​

ಆಯತೊಲ್ಲಾ ಅಲಿ ಖಮೇನಿ (ಎಡ), ಮೋಜ್ತಬಾ ಖಮೇನಿ (ಬಲ)
ಆಯತೊಲ್ಲಾ ಅಲಿ ಖಮೇನಿ (ಎಡ), ಮೋಜ್ತಬಾ ಖಮೇನಿ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆದ ಮೋಜ್ತಬಾ ಖಮೇನಿ
  • ವಾಕಿಂಗ್​ ಎಂದು ಹೊರಹೋದ ಬೆನ್ನಲ್ಲೇ ಯುಎಸ್​-ಇಸ್ರೇಲಿ ದಾಳಿ
  • ಆಡಿಯೋ ಲೀಕ್​ ಬಿಚ್ಚಿಡ್ತು ಅಸಲಿ ಕಾರಣ
ಟೆಹ್ರಾನ್​: ಅಮೆರಿಕ-ಇಸ್ರೇಲ್​ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನ್​ನ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ಬಲಿಯಾದರು. ಅವರ ನಂತರ ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮೋಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡರು. ಈಗ ಇವರನ್ನು ಟಾರ್ಗೆಟ್​ ಮಾಡಿಕೊಂಡಿರುವ ಅಮೆರಿಕ, ಹೇಗಾದರೂ ನೂತನ ನಾಯಕನನ್ನು ಹೊಡೆದುರುಳಿಸಲು ಪಣತೊಟ್ಟಿದೆ.
ಫೆ.28ರಂದು ಅಮೆರಿಕ-ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಿಂದ ಮೋಜ್ತಬಾ ಪವಾಡದಂತೆ ಕೊದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ದಾಳಿಗೂ ಕೆಲವೇ ಸೆಕೆಂಡುಗಳ ಮೊದಲು ತಮ್ಮ ತೋಟದಲ್ಲಿ ವಾಕಿಂಗ್ ಮಾಡಲು ತೆರಳಿದ್ದೇ ಇಂದು ಅವರು ಜೀವಂತವಾಗಿರಲು ಕಾರಣ ಎಂದು ಲೀಕ್​ ಆಗಿರುವ ಆಡಿಯೋ ಕ್ಲಿಪ್​ ಒತ್ತಿ ಹೇಳಿದೆ.
ಖಮೇನಿ ಅವರ ಕಚೇರಿಯ ಮುಖ್ಯಸ್ಥ ಮಜಾಹೆರ್ ಹೊಸೇನಿ ಆಡಿಯೋದಲ್ಲಿ ಮಾತನಾಡಿ, ದಾಳಿ ಸಂಭವಿಸುವ ಕೆಲವೇ ಕೆಲವು ನಿಮಿಷಗಳ ಮೊದಲು ಮೊಜ್ತಬಾ ಖಮೇನಿ ಕಟ್ಟಡದೊಳಗಿದ್ದರು. ಆದರೆ, ಕ್ಷಿಪಣಿಗಳು ಕಟ್ಟಡಕ್ಕೆ ಅಪ್ಪಳಿಸುವ ಸೆಕೆಂಡ್​ಗಳಲ್ಲಿ ಅವರು ಹೊರಗೆ ಹೋದರು. ಇದು ಅವರ ಪ್ರಾಣವನ್ನು ಉಳಿಸಿತು ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net