ಐವತ್ತು ರನ್ ಆಗ್ತಿದ್ದ ಹಾಗೆ ಆಕ್ಟಿಂಗ್ ಶುರುವಾಯ್ತು!...ಮೈದಾನದಲ್ಲೇ ರಿಜ್ವಾನ್ ಕಾಲೆಳೆದ ಲಿಟ್ಟನ್ ದಾಸ್; ಅಸಲಿ ಕಾರಣ ಇಲ್ಲಿದೆ | Mohammad Rizwan Troll

Mohammad Rizwan Troll | ಮೈದಾನದಲ್ಲೇ ರಿಜ್ವಾನ್ ಕಾಲೆಳೆದ ಲಿಟ್ಟನ್ ದಾಸ್
Mohammad Rizwan Troll | ಮೈದಾನದಲ್ಲೇ ರಿಜ್ವಾನ್ ಕಾಲೆಳೆದ ಲಿಟ್ಟನ್ ದಾಸ್
Published on
Mohammad Rizwan Troll: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 2-0 ಅಂತರದಿಂದ ಕ್ಲೀನ್‌ಸ್ವೀಪ್ ಮುಖಭಂಗಕ್ಕೆ ಒಳಗಾಗಿದೆ. ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 4ನೇ ದಿನದ ಆಟವು ಪಾಕಿಸ್ತಾನದ ಪತನಕ್ಕೆ ಸಾಕ್ಷಿಯಾಗುವುದರ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಭರ್ಜರಿ ಕಾಮಿಡಿಗೂ ವೇದಿಕೆಯಾಯಿತು. ಅದರ ಮುಖ್ಯ ಪಾತ್ರಧಾರಿಗಳು ಪಾಕ್ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಬಾಂಗ್ಲಾ ಕೀಪರ್ ಲಿಟ್ಟನ್ ದಾಸ್.
ಗೆಲ್ಲಲು 437 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನದ ಪರ ಹೋರಾಡುತ್ತಿದ್ದ ರಿಜ್ವಾನ್ ಅರ್ಧಶತಕ ಪೂರೈಸಿದ ತಕ್ಷಣ, ಸೈಟ್‌ಸ್ಕ್ರೀನ್ ಬಳಿ ಯಾರೋ ಓಡಾಡುತ್ತಿದ್ದಾರೆ ಎಂದು ಬ್ಯಾಟಿಂಗ್ ನಿಲ್ಲಿಸಿ ಅಂಪೈರ್‌ಗೆ ದೂರು ನೀಡಲಾರಂಭಿಸಿದರು. ಸಂಜೆ ಹೊತ್ತಿನಲ್ಲಿ ಬೆಳಕು ಕಡಿಮೆಯಾಗುತ್ತಿರುವುದರಿಂದ ರಿಜ್ವಾನ್ ಬೇಕೆಂದೇ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಿಟ್ಟಾದ ಲಿಟ್ಟನ್ ದಾಸ್, ರಿಜ್ವಾನ್ ಬಳಿ ಬಂದು ನೇರವಾಗಿ ಜಗಳಕ್ಕೆ ನಿಂತರು.

ಸ್ಟಂಪ್ ಮೈಕ್ರೋಫೋನ್‌ನಲ್ಲಿ ಅವರಿಬ್ಬರ ಸಂಭಾಷಣೆ ಹೀಗಿದೆ

ಲಿಟ್ಟನ್ ದಾಸ್: "ಯೇ ಕ್ಯಾ ಕರ್ ರಹೇ ಹೋ?" (ಏನ್ ಮಾಡ್ತಿದ್ದೀಯಾ ಇಲ್ಲಿ?)
ಮೊಹಮ್ಮದ್ ರಿಜ್ವಾನ್: (ಬೌಂಡರಿ ಕಡೆ ಕೈ ತೋರಿಸುತ್ತಾ) "ವೋ ದೇಖ್ ವೋ ದೇಖ್ ವೋ ಖಡಾ ಹೈ." (ಅಲ್ಲಿ ನೋಡು, ಅಲ್ಲಿ ನೋಡು ಅವನು ನಿಂತಿದ್ದಾನೆ.)
ಲಿಟ್ಟನ್ ದಾಸ್: "ಉಧರ್ ಕ್ಯಾ ದೇಖ್ ರಹೇ ಹೋ? ಇಧರ್ ಬ್ಯಾಟಿಂಗ್ ಕರೋ. 50 ಹೋ ಗಯಿ, ಅಬ್ ಆಕ್ಟಿಂಗ್ ಶುರು ಹೋ ಜಾಯೇಗಿ!" (ಅಲ್ಲಿಗೇನ್ ನೋಡ್ತೀಯಾ? ಇಲ್ಲಿ ಬ್ಯಾಟಿಂಗ್ ಮಾಡು. ಐವತ್ತು ರನ್ ಆಗ್ತಿದ್ದ ಹಾಗೆ ಆಕ್ಟಿಂಗ್ ಶುರುವಾಯ್ತು!)
ಹೇರಾ ಫೇರಿ ಸ್ಟೈಲ್‌ನಲ್ಲಿ ಟ್ರೋಲ್ ಮಾಡಿದ ಬಾಂಗ್ಲಾ ಪಡೆ
ಲಿಟ್ಟನ್ ದಾಸ್ ಕೊಟ್ಟ ಈ ಡೈಲಾಗ್ ಬಾಂಗ್ಲಾದೇಶದ ಸ್ಲಿಪ್ ಫೀಲ್ಡರ್‌ಗಳಿಗೆ ಭರ್ಜರಿ ಕ್ಲೂ ಕೊಟ್ಟಂತಾಯಿತು. ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಬಾಂಗ್ಲಾ ಫೀಲ್ಡರ್‌ಗಳು ತಕ್ಷಣವೇ ಬಾಲಿವುಡ್‌ನ ಐಕಾನಿಕ್ ಕಾಮಿಡಿ ಸಿನಿಮಾ ‘ಹೇರಾ ಫೇರಿ’ ಶೈಲಿಯಲ್ಲಿ ರಿಜ್ವಾನ್ ಕಾಲೆಳೆಯಲು ಶುರು ಮಾಡಿದರು.
ಒಬ್ಬ ಫೀಲ್ಡರ್, ಹಮ್ ಇಸ್ ಓವರ್ ಆಕ್ಟಿಂಗ್ ಕಾ ಫಿಫ್ಟಿ ಪೈಸಾ ಕಾಟೇಂಗೆ! (ಈ ಓವರ್ ಆಕ್ಟಿಂಗ್‌ಗೆ ಐವತ್ತು ಪೈಸೆ ಕಟ್ ಮಾಡ್ಬೇಕು!) ಎಂದು ಜೋರಾಗಿ ಕೂಗಿದರೆ, ಇನ್ನೊಬ್ಬ ಫೀಲ್ಡರ್ ಅಚ್ಛಾ ಆಕ್ಟಿಂಗ್ ಕರ್ ರಹಾ ಹೈ, ಸಬ್ಕೋ ಸಿಖಾ ರಹಾ ಹೈ (ಸೂಪರ್ ಆಗಿ ಆಕ್ಟಿಂಗ್ ಮಾಡ್ತಿದ್ದಾನೆ, ಎಲ್ಲರಿಗೂ ಹೇಳಿಕೊಡ್ತಿದ್ದಾನೆ) ಎಂದು ರೇಗಿಸಿದರು.

ಬಾಲಿವುಡ್‌ನಲ್ಲಿ ಚಾನ್ಸ್ ಸಿಗಲ್ಲ ಭಾಯ್!

ಅಷ್ಟಕ್ಕೆ ನಿಲ್ಲದ ಬಾಂಗ್ಲಾ ಪಡೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಪರಿಸ್ಥಿತಿಯನ್ನು ನೆನಪಿಸುವಂತೆ ಮತ್ತೊಂದು ದೊಡ್ಡ ಟಾಂಗ್ ನೀಡಿತು. ರಿಜ್ವಾನ್ ಅಂಪೈರ್ ಜೊತೆ ನಾಟಕೀಯವಾಗಿ ವಾದಿಸುವುದನ್ನು ನೋಡಿ ಶಾರ್ಟ್ ಲೆಗ್‌ನಲ್ಲಿದ್ದ ಫೀಲ್ಡರ್, ಬಾಲಿವುಡ್ ಮೇ ಚಲಾ ಜಾಯೇಗಾ ಭಾಯ್! (ಇವನು ಬಾಲಿವುಡ್‌ಗೇ ಹೋಗ್ಬಿಡ್ತಾನೆ ಭಾಯ್!) ಎಂದನು.
ಅದಕ್ಕೆ ಮತ್ತೊಬ್ಬ ಫೀಲ್ಡರ್ ತಕ್ಷಣವೇ, ನಹಿ, ನಹಿ, ವಹಾ ಜಗಹ ನಹಿ ಮಿಲೇಗಾ ಭಾಯ್ (ಇಲ್ಲ ಇಲ್ಲ, ಅಲ್ಲಿ ಜಾಗ ಸಿಗಲ್ಲ ಭಾಯ್) ಎಂದು ನಗುತ್ತಾ ಉತ್ತರಿಸಿದ. ಭಾರತೀಯ ಚಿತ್ರರಂಗದಲ್ಲಿ ಪಾಕಿಸ್ತಾನಿ ಕಲಾವಿದರ ಮೇಲಿರುವ ನಿಷೇಧವನ್ನು ನೆನಪಿಸಿ ಬಾಂಗ್ಲಾ ಆಟಗಾರರು ರಿಜ್ವಾನ್‌ಗೆ ಸ್ಲೆಡ್ಜಿಂಗ್ ಮಾಡಿದರು.
ಕೊನೆಯ ದಿನ 94 ರನ್ ಗಳಿಸಿ ಶತಕದ ಸನಿಹದಲ್ಲಿದ್ದ ರಿಜ್ವಾನ್, ಶೊರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಔಟಾದರು. ಪಾಕಿಸ್ತಾನ ಕೊನೆಯ 3 ವಿಕೆಟ್‌ಗಳನ್ನು ಒಂದೂ ರನ್ ಗಳಿಸದೇ ಕಳೆದುಕೊಂಡು 78 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಪಾಕಿಸ್ತಾನ ಪಂದ್ಯ ಸೋತಿರಬಹುದು, ಆದರೆ ಈ ಸ್ಟಂಪ್-ಮೈಕ್ ಆಡಿಯೋ ಮಾತ್ರ ಕ್ರಿಕೆಟ್ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಉಳಿಯಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net