ನಕ್ಸಲರ ಮಗುವಿಗೆ ಹಾಲುಣಿಸಿದ ಸಚಿವೆ: ರಕ್ಷಣಾ ಕಾರ್ಯಾಚರಣೆ ವೇಳೆ ಸೆರೆಯಾದ 'ಹೃದಯಸ್ಪರ್ಶಿ' ಘಟನೆ; ಸೀತಾ ಬಾಡಿ ವಿಡಿಯೋ ವೈರಲ್​! Sita Badi Viral Video

ನಕ್ಸಲ್​ ಮಗುವಿಗೆ ಹಾಲುಣಿಸಿದ ಸಚಿವೆ ಸೀತಾ ಬಾಡಿ
ನಕ್ಸಲ್​ ಮಗುವಿಗೆ ಹಾಲುಣಿಸಿದ ಸಚಿವೆ ಸೀತಾ ಬಾಡಿ
Published on

ಪ್ರಮುಖ ಮುಖ್ಯಾಂಶಗಳು

  • ನಕ್ಸಲ್​ ಮಗುವಿಗೆ ಹಾಲುಣಿಸಿದ ಸಚಿವೆ
  • ಹಸಿವಿನಿಂದ ಅಳುತ್ತಿದ್ದ ನವಜಾತ ಶಿಶುವಿಗೆ ಸಚಿವೆ ಸೀತಾ ಬಾಡಿ ಸ್ತನಪಾನ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಕಠ್ಮಂಡು: ಕಳೆದ ಕೆಲ ದಿನಗಳ ಹಿಂದೆ ನೇಪಾಳ ಸರ್ಕಾರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸೀತಾ ಬಾಡಿ (Sita Badi Viral Video) ಮಾಡಿರುವ ಕೆಲಸವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ.

ನೇಪಾಳದ ನಕ್ಸಲ್​ ಪ್ರದೇಶದಿಂದ ಮಕ್ಕಳನ್ನು ರಕ್ಷಿಸುತ್ತಿದ್ದ ಸಂದರ್ಭದಲ್ಲಿ ಅಳುತ್ತಿದ್ದ ಮಗುವೊಂದಕ್ಕೆ ಸೀತಾ ಬಾಡಿ ಹಾಲುಣಿಸಿರುವ ವಿಡಿಯೋ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

17 ದಿನಗದ ಕಂದಮ್ಮಗೆ ಸ್ತನಪಾನ!

ಮಾಹಿತಿ ಪ್ರಕಾರ, ಕಠ್ಮಂಡುವಿನಲ್ಲಿರುವ ನಕ್ಸಲ್​ ಪ್ರದೇಶದಲ್ಲಿ ಸಿಲುಕಿರುವ ಮಕ್ಕಳ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯದ ಸಮಯದಲ್ಲಿ ಸುಮಾರು 20 ಮಕ್ಕಳನ್ನು ರಕ್ಷಣೆ ಮಾಡಿದ್ದು, ಇದರಲ್ಲಿ 12 ಗಂಡು ಹಾಗೂ 8 ಹೆಣ್ಣು ಮಕ್ಕಳಿದ್ದರೆಂದು ಹೇಳಲಾಗಿದೆ.

ಈ ರಕ್ಷಣೆ ನಡೆಸುತ್ತಿದ್ದಾಗ, 17 ದಿನಗಳ ಹಸುಗೂಸೊಂದು, ಹಸಿವಿನಿಂದ ಅಳುತ್ತಿದೆ. ನೇಪಾಳದಲ್ಲಿ ಕೆಲ ದಿನಗಳಿಂದ ಅಧಿಕ ಮಳೆಯಾಗುತ್ತಿರುವ ಹಿನ್ನಲೆ, ಮಕ್ಕಳಿದ್ದ ಕೇಂದ್ರ ಕೂಡ ತೀವ್ರ ಮಳೆಗೆ ತತ್ತರಿಸಿದ ಹಿನ್ನೆಲೆ ಸರಿಯಾಗಿ ಆಹಾರ ಸೇರಿದಂತೆ ಮೂಲಭೂತ ಸೌಲಭ್ಯ ತಲುಪಲು ಸಾಧ್ಯವಾಗಿಲ್ಲ.


ರಕ್ಷಣೆಯ ಸಂದರ್ಭದಲ್ಲಿ ಮಣ್ಣಿನಿಂದ ಆವೃತ್ತವಾಗಿದ್ದ, ಈ ಮಗುವನ್ನು ಎತ್ತುಕೊಂಡ ಸೀತಾ ಬಾಡಿ, ಮಗುವಿನ ಅಳುವನ್ನು ಕೇಳಲಾರದೆ, ಸ್ಥಳದಲ್ಲೇ ಸ್ತನಪಾನ ಮಾಡಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿದ್ದು, ನೆಟ್ಟಿಗರು ಸಚಿವೆಯ ಮಾತೃ ಹೃದಯವನ್ನು ಕೊಂಡಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net