ಮಧ್ಯಂತರ ಚುನಾವಣೆಯ ಫಲಿತಾಂಶ ಮುಂದಿನ 2 ವರ್ಷ ಅಮೆರಿಕದ ಸರಕಾರದ ವರ್ತನೆಯನ್ನು ಮತ್ತು ಟ್ರಂಪ್ ಅವರ ಆಡಳಿತ ಶಕ್ತಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ರಿಪಬ್ಲಿಕನ್ನರು ಅಧಿಕಾರ ಉಳಿಸಿಕೊಂಡರೆ, ಟ್ರಂಪ್ಗೆ ಮುಂದಿನ 2 ವರ್ಷಗಳ ಅವಧಿ ಸುಲಭವಾಗಲಿದೆ. ಉದ್ದೇಶಿತ ತೆರಿಗೆ ಕ್ರಮಗಳು, ಗಡಿ ನಿರ್ಬಂಧಗಳು, ನ್ಯಾಯಾಂಗಕ್ಕೆ ತಮಗೆ ಬೇಕಾದ ಕನ್ಸರ್ವೇಟಿವ್ ನ್ಯಾಯಾಧೀಶರ ನೇಮಕ ಮತ್ತು ಆರ್ಥಿಕ ಮಸೂದೆಗಳಿಗೆ ಸುಲಭ ಅಂಗೀಕಾರ ಸಾಧ್ಯವಾಗಲಿದೆ. ಒಂದು ವೇಳೆ, ಡೆಮಾಕ್ರಟಿಕ್ ಪಕ್ಷ ಬಹುಮತ ಸಾಧಿಸಿದರೆ, ಆಡಳಿತಾತ್ಮಕ ಸ್ತಂಭನ ಸ್ಥಿತಿ (ಗ್ರಿಡ್ಲಾಕ್) ನಿರ್ಮಾಣವಾಗುತ್ತದೆ. ಪ್ರತಿಯೊಂದು ನೀತಿ&ನಿರ್ಧಾರಗಳಿಗೂ ತಡೆ ಬೀಳತೊಡಗುತ್ತದೆ. ಟ್ರಂಪ್ ನಿರ್ಧಾರಗಳ ವಿರುದ್ಧ ಸಂಸದೀಯ ತನಿಖೆ ಆರಂಭಿಸುವ ಪೂರ್ಣ ಅಧಿಕಾರ ಕೆಳಮನೆಯ ಡೆಮಾಕ್ರಟಿಕ್ ನಾಯಕರಿಗೆ ಸಿಗುತ್ತದೆ.