ಮಧ್ಯಪ್ರಾಚ್ಯ ಮಹಾಯುದ್ಧ: ಇರಾನ್‌ನ ಪ್ರಮುಖ 'ಚಾಬಹಾರ್' ಬಂದರಿನ ಮೇಲೆ ಅಮೆರಿಕ ವೈಮಾನಿಕ ದಾಳಿ; ರಕ್ಷಣಾ ಕಾರ್ಯದರ್ಶಿಯಿಂದ ಫೋಟೋ ರಿಲೀಸ್! US Airstrike Chabahar Port

ಇರಾನ್‌ನ ಪ್ರಮುಖ ಚಾಬಹಾರ್ ಬಂದರಿನ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ ಅಮೆರಿಕ ಪಡೆಗಳು
ಇರಾನ್‌ನ ಪ್ರಮುಖ ಚಾಬಹಾರ್ ಬಂದರಿನ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ ಅಮೆರಿಕ ಪಡೆಗಳು
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್‌ನ ಪ್ರಮುಖ ಚಾಬಹಾರ್ ಬಂದರಿನ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದ ಅಮೆರಿಕ ಪಡೆಗಳು
  • ಮಧ್ಯಪ್ರಾಚ್ಯದಲ್ಲಿ ಮುರಿದುಬಿದ್ದ ಕದನ ವಿರಾಮ
  • ಯುಎಸ್ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ದಾಳಿಯ ಫೋಟೋ ಬಿಡುಗಡೆ
ತೆಹ್ರಾನ್​: ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ಪ್ರಾರಂಭವಾಗಿದೆ. ಸತತ ಆರು ದಿನಗಳಿಂದ ಇರಾನ್​ ಮೇಲೆ ದಾಳಿ ಮಾಡುತ್ತಿರುವ ಅಮೆರಿಕ ಪಡೆ ಇಂದು (ಶುಕ್ರವಾರ, ಜು.17) ಇರಾನ್​ನ ಪ್ರಮುಖ ಬಂದರಾದ ಚಾಬಹಾರ್ (US Airstrike Chabahar Port) ಬಂದರಿನ ಮೇಲೆ ದಾಳಿ ಮಾಡಿದ್ದು, ಅಲ್ಲಿದ್ದ ಕಣ್ಗಾವಲು ಗೋಪುರ (Surveillance Tower) ಧ್ವಂಸಗೊಂಡಿರುವುದಾಗಿ ವರದಿಯಾಗಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಹಂಚಿಕೊಂಡಿರುವ ಈ ಚಿತ್ರದಲ್ಲಿ ಅಮರಿಕದ ವೈಮಾನಿಕ ದಾಳಿಗೆ ತುತ್ತಾಗಿ ಗೋಪುರವೊಂದು ಕುಸಿದು ಬಿದ್ದಿದ್ದು, ಸುತ್ತಲೂ ಹೊಗೆ ಆವರಿಸಿರುವುದನ್ನು ಕಾಣಬಹುದಾಗಿದೆ.

ಚಾಬಹಾರ್ ಮೇಲೆ ಮೂರನೇ ದಾಳಿ!

ಚಾಬಹಾರ್ ಬಂದರು ಇರಾನಿನ ಪ್ರಮುಖ ಬಂದರು ಪಟ್ಟಣವಾಗಿದ್ದು, ಈ ದಾಳಿ ಅಮೆರಿಕ ನಡೆಸಿರುವ ಮೂರನೇ ದಾಳಿ ಎಂದು ಖುದ್ದು ಇರಾನಿನ ಮಾಧ್ಯಮಗಳು ವರದಿಮಾಡಿವೆ. ಆದರೆ ಈ ದಾಳಿಯಿಂದ ಅಲ್ಲಿದ್ದ ಕಣ್ಗಾವಲು ಗೋಪುರ ನಾಶವಾಗಿದೆ ಎಂದು ಇರಾನ್​ ಇಲ್ಲಿವರೆಗೆ ದೃಢಪಡಿಸಿಲ್ಲ.
ಚಾಬಹಾರ್ ಬಂದರು ಇದು ಇರಾನ್‌ನ ಆಗ್ನೇಯ ಸಿಸ್ತಾನ್ ಮತ್ತು ಬಲೂಚೆಸ್ತಾನ್ ಪ್ರಾಂತ್ಯದಲ್ಲಿದ್ದು, ಇದು ಹೊರ್ಮುಜ್​ ಜಲಸಂಧಿ ಹಾಗು ಗಲ್ಫ್​ ಆಫ್​ ಒಮನ್​ಗೆ ದ್ವಾರವಾಗಿದ್ದು, ಇದು ಇರಾನಿನ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಇದರ ಮೇಲಿನ ದಾಳಿ ಇರಾನ್​ಗೆ ಕೊಡಲಿ ಪೆಟ್ಟನ್ನು ನೀಡಿದಂತಾಗುತ್ತದೆ ಎಂದು ಜಾಗತಿಕ ರಾಜಕೀಯ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುರಿದು ಬಿದ್ದ ಒಪ್ಪಂದ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷ ನೂರು ದಿನಗಳನ್ನು ಪೂರೈಸುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕದನವಿರಾಮ ಘೋಷಿಸಿದ್ದರು. ನಂತರ ಪಾಕಿಸ್ತಾನದಲ್ಲಿ ಇರಾನ್​ ಹಾಗೂ ಅಮೆರಿಕದ ಅಧಿಕಾರಿಗಳು ಶಾಂತಿ ಮಾತುಕತೆಯನ್ನು ನಡೆಸಿದ್ದರು. ಆದರೆ ಈ ಯಾವುದೇ ಮಾತುಕತೆಗಳು ಸುಖಾಂತ್ಯ ಕಂಡಿರಲಿಲ್ಲ.
ನಂತರ ಇರಾನ್​ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಅಂತ್ಯ ಸಂಸ್ಕಾರದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್​ನನ್ನು ಕೊಲ್ಲಬೇಕು ಎಂಬ ಘೋಷಣೆಗಳು ಕೇಳಿಬಂದವು. ನಂತರ ಟರ್ಕಿಯಲ್ಲಿ ನಡೆಯುತ್ತಿದ್ದ ನ್ಯಾಟೋ ಸಭೆಯಲ್ಲಿದ್ದ ಟ್ರಂಪ್​, ಇರಾನ್​ ಜೊತೆ ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ, ಇನ್ಮುಂದೆ ಯಾವುದೇ ಕದನ ವಿರಾಮ ಜಾರಿಯಲ್ಲಿರುವುದಿಲ್ಲ ಎಂದು ಘೋಷಿಸುವ ಮೂಲಕ ಶಾಂತವಾಗಿದ್ದ ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ ಸ್ಥಿತಿ ತಲುಪಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net