ಇರಾನ್‌ನ ಪ್ರಮುಖ ಪರಮಾಣು ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳೇ ಗುರಿಯಾಗಿರುವುದರಿಂದ, ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ವಿಶ್ವಸಂಸ್ಥೆಯು ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸುತ್ತಿದೆ. ಆದರೆ, ಇರಾನ್‌ನ ಪ್ರತೀಕಾರದ ಸಾಧ್ಯತೆಗಳು ಈ ವಲಯವನ್ನು ಮತ್ತಷ್ಟು ಅಸ್ಥಿರತೆಗೆ ತಳ್ಳುವ ಆತಂಕ ಮೂಡಿಸಿವೆ,(ಏಜೆನ್ಸೀಸ್).