10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ನಾಯಿ ಈಗ ಪತ್ತೆ! ಇದು ಮೈಕ್ರೋಚಿಪ್ ಚಮತ್ಕಾರ..dog

dog
dog
Published on
ಅಮೆರಿಕಾ: ( dog) 10 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ನಾಯಿಯೊಂದು ಈಗ ತನ್ನ ಮಾಲೀಕರನ್ನು ಸೇರಿಕೊಂಡಿದೆ. ಅಮೆರಿಕದ ಫ್ಲೋರಿಡಾದಲ್ಲಿ ಅತ್ಯಂತ ಆಶ್ಚರ್ಯಕರ ಮತ್ತು ಮನಕಲಕುವ ಘಟನೆಯೊಂದು ನಡೆದಿದೆ.
'ಬಟರ್‌ಕಪ್' (Buttercup) ಹೆಸರಿನ ಈ ಹೆಣ್ಣು ನಾಯಿಗೆ ಈಗ 15 ವರ್ಷ. ಇದು ಸುಮಾರು 10 ವರ್ಷಗಳ ಹಿಂದೆ ತನ್ನ ಮನೆಯಿಂದ ನಾಪತ್ತೆಯಾಗಿತ್ತು. ಇತ್ತೀಚೆಗೆ ಈ ನಾಯಿಯನ್ನು ಮಿಯಾಮಿ-ಡೇಡ್ ಅನಿಮಲ್ ಸರ್ವಿಸಸ್ (Miami-Dade Animal Services) ಸಿಬ್ಬಂದಿ ಬೀದಿಯಲ್ಲಿ ಪತ್ತೆಹಚ್ಚಿ ಆಶ್ರಯ ತಾಣಕ್ಕೆ ಕರೆತಂದಿದ್ದರು.
ನಾಯಿಯ ಮೇಲೆ ನಡೆಸಿದ ತಪಾಸಣೆಯ ವೇಳೆ ಅದರ ದೇಹದಲ್ಲಿ ಅಳವಡಿಸಲಾಗಿದ್ದ 'ಮೈಕ್ರೋಚಿಪ್' ಪತ್ತೆಯಾಗಿದೆ. ಈ ಚಿಪ್ ಅನ್ನು ಸ್ಕ್ಯಾನ್ ಮಾಡಿದಾಗ ಅದರ ಮಾಲೀಕರ ವಿಳಾಸ ಮತ್ತು ಫೋನ್ ನಂಬರ್ ಲಭ್ಯವಾಗಿದೆ.ನಾಯಿ ಬದುಕಿರುವುದೇ ಇಲ್ಲ ಎಂದು ಭಾವಿಸಿದ್ದ ಮಾಲೀಕರಿಗೆ ಆಶ್ರಯ ತಾಣದಿಂದ ಕರೆ ಹೋದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. 10 ವರ್ಷಗಳ ನಂತರ ನಾಯಿ ಮತ್ತು ಮಾಲೀಕರು ಒಂದಾಗಿದ್ದಾರೆ.
ಈ ಘಟನೆಯ ನಂತರ ಮಿಯಾಮಿ-ಡೇಡ್ ಅನಿಮಲ್ ಸರ್ವಿಸಸ್ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ. ಸಾಕುಪ್ರಾಣಿಗಳಿಗೆ ಮೈಕ್ರೋಚಿಪ್ ಅಳವಡಿಸುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ. ಒಂದು ಸಣ್ಣ ಸ್ಕ್ಯಾನ್ 10 ವರ್ಷಗಳ ದೀರ್ಘ ವಿರಹವನ್ನು ಅಂತ್ಯಗೊಳಿಸಿದೆ.
ಈ ಸುದ್ಧಿ ಈಗ ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಈ ಅದ್ಭುತ ಮಿಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net