ಮೆಕ್ಸಿಕೋ ದೇಶದ ತಬಾಸ್ಕೊ ರಾಜ್ಯದ ವಿಲ್ಲಾಹೆರ್ಮೋಸಾ ಮೂಲದ ಫಾತಿಮಾ ಬಾಷ್, ಫೆರ್ನಾಂಡಿಸ್ ಫ್ಯಾಷನ್ ಮತ್ತು ಉಡುಪು ವಿನ್ಯಾಸಕರಾಗಿದ್ದು, ಮೆಕ್ಸಿಕೋ, ಇಟಲಿ ಮತ್ತು ಯುಎಸ್ನಲ್ಲಿ ಅಧ್ಯಯನ ಮಾಡಿದ್ದಾರೆ. 25 ವರ್ಷದ ಈಕೆ ಡಿಸ್ಲೆಕ್ಸಿಯಾ, ಎಡಿಎಚ್ಡಿ ಮತ್ತು ಹೈಪರ್ಆಕ್ಟಿವಿಟಿಯಂತಹ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಇತರರಿಗೆ ಮಾದರಿಯಾಗಿದ್ದಾಳೆ. ಅಲ್ಲದೆ, ತನ್ನ ಅನುಭವನ್ನೇ ಕೆಲಸವಾಗಿ ಪರಿವರ್ತಿಸಿಕೊಂಡಿದ್ದಾರೆ. ತನ್ನ ಡಿಸೈನ್ನಲ್ಲಿ ಬಳಸಿ ಬೀಸಾಡಿದ ವಸ್ತುಗಳನ್ನೇ ಬಳಸಿಕೊಂಡು ಫ್ಯಾಷನ್ ಲೋಕದಲ್ಲಿ ತನ್ನದೇಯಾದ ಹೆಸರು ಮಾಡಿದ್ದಾಳೆ. ಫಾತಿಮಾ ಅವರು ಮೆಕ್ಸಿಕೋದ ಯೂನಿವರ್ಸಿಡಾಡ್ ಇಬೆರೊಅಮೆರಿಕಾನಾ, ಇಟಲಿಯ ಮಿಲನ್ನಲ್ಲಿರುವ ನುವಾ ಅಕಾಡೆಮಿಯಾ ಡಿ ಬೆಲ್ಲೆ ಆರ್ಟಿ ಮತ್ತು ಯುಎಸ್ಎಯ ವರ್ಮೊಂಟ್ನಲ್ಲಿರುವ ಲಿಂಡನ್ ಇನ್ಸ್ಟಿಟ್ಯೂಟ್ನಲ್ಲಿ ಅಧ್ಯಯನ ಮಾಡಿದ್ದಾರೆ.