ರಣರಂಗವಾದ ಮೆಕ್ಸಿಕೊ!

ರಣರಂಗವಾದ ಮೆಕ್ಸಿಕೊ!
ರಣರಂಗವಾದ ಮೆಕ್ಸಿಕೊ!
Published on

ಪ್ರಮುಖ ಮುಖ್ಯಾಂಶಗಳು

  • ಮೆಕ್ಸಿಕೊದಲ್ಲಿ ಮೇಯರ್​ ಹತ್ಯೆ ಸೃಷ್ಟಿಸಿದ ತಲ್ಲಣ
  • ಈ ಸ್ಥಿತಿಗೇನು ಕಾರಣ? ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಹೆಚ್ಚುತ್ತಿರುವ ಅಪರಾಧ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಶನಿವಾರ ಮೆಕ್ಸಿಕೊದಲ್ಲಿ(Mexico) ಸಾವಿರಾರು ಯುವಕರು ಪ್ರತಿಭಟನೆ ನಡೆಸಿದ್ದಾರೆ. ಅವ್ಯವಸ್ಥೆಯ ವಿರುದ್ಧ ಹಲವು ದೇಶಗಳಲ್ಲಿ ಜೆನ್​ ಝಿ ಸಿಡಿದೆದ್ದಿದ್ದು, ಈಗ ಮೆಕ್ಸಿಕೊ ಕೂಡ ಯುವಕರ ಹೋರಾಟಕ್ಕೆ ಬೆಚ್ಚಿಬಿದ್ದಿದೆ. ಮೇಯರ್​ ಹತ್ಯೆಯ ನಂತರ ಆಕ್ರೋಶ ಗೊಂಡ ಸಾವಿರಾರು ಯುವಕರು ಬೀದಿಗಳಿದು, ಕೃತ್ಯವನ್ನು ಖಂಡಿಸಿದ್ದಾರೆ. ರಾಷ್ಟ್ರಪತಿ ಅಧಿಕೃತ ನಿವಾಸದ ಆವರಣ ಗೋಡೆಯನ್ನು ಧ್ವಂಸಗೊಳಿಸಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ.
ಮೆಕ್ಸಿಕೊದಲ್ಲಿ ಮತ್ತೆಮತ್ತೆ ಘೋರ ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಜನಜೀವನ ಭಯಭೀತಗೊಂಡಿದೆ. ಅಲ್ಲದೆ, ಭ್ರಷ್ಟಾಚಾರದ ಪ್ರಮಾಣವೂ ಏರುಮುಖವಾಗಿದ್ದು, ಯುವಕರಲ್ಲಿ ಆಕ್ರೋಶ ಹುಟ್ಟಿಸಿದೆ. ಯುವಕರ ಬೃಹತ್​ ಹೋರಾಟಕ್ಕೆ ಸಾಯಾಗಿರುವ ಮೆಕ್ಸಿಕೊ ಬದಲಾವಣೆಗಾಗಿ ಹಾತೊರೆಯುತ್ತಿರುವುದು ಹೌದು. ಜೆನ್​ ಝಿ ತಲೆಮಾರಿನವರು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು, ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇದಕ್ಕೆ ಸರ್ಕಾರ ಮಣಿಯದಿರುವ ಪರಿಣಾಮ ಈಗ ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ಶನಿವಾರ ಸಾವಿರಾರು ಯುವಕ&ಯುವತಿಯರು ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸಿ, ಅಪರಾಧ ಕೃತ್ಯಗಳ ಹೆಚ್ಚಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಯರ್​ ಹತ್ಯೆ ಸೃಷ್ಟಿಸಿದ ತಲ್ಲಣ: ಮೆಕ್ಸಿಕೊದ ಪಶ್ಚಿಮ ರಾಜ್ಯವಾದ ಮೈಕೋವಕನ್​ನ ಉರುಪಾನ್​ ನಗರದ ಮೇಯರ್​ ಕಾಲೋರ್ಸ್​ ಮಾಂಜೊ ಅವರನ್ನು ದುಷ್ಕರ್ಮಿಗಳು ನವೆಂಬರ್​ 1ರಂದು ಸಾರ್ವಜನಿಕ ಸಮಾರಂಭದಲ್ಲೇ ಗುಂಡಿಕ್ಕಿ ಹತ್ಯೆಗೈದರು. ಮೇಯರ್​ ಕಾಲೋರ್ಸ್​ ಮಾಂಜೊ ಅಪರಾಧ ವಿರೋಧಿ ನೀತಿಗಳಿಗೆ ಗುರುತಿಸಲ್ಪಟ್ಟಿದ್ದರು ಮತ್ತು ಮಾದಕದ್ರವ್ಯ ಜಾಲಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ಆಗ್ರಹಿಸಿದ್ದರು. ಅಪರಾಧ ಕೃತ್ಯಗಳ ವಿರುದ್ಧ ದನಿ ಎತ್ತಿದವರನ್ನೇ ಹತ್ಯೆ ಮಾಡಲಾಗುತ್ತಿರುವುದು ವ್ಯವಸ್ಥೆಯ ವೈಲ್ಯಕ್ಕೆ ಸಾ, ಮೇಯರ್​ ಲಾಲೋರ್ಸ್​ ಮಾಂಜೊ ಅವರ ಪ್ರಾಣವನ್ನು ಸರ್ಕಾರ ಉಳಿಸಬಹುದಿತ್ತು ಎಂದು ಸಿಡಿದೆದ್ದ ಯುವಕರು ಹಲವು ನಗರಗಳಲ್ಲಿ ನವೆಂಬರ್​ 2ರಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ, ನ.15ರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರಕ್ಕೆ ಸವಾಲೊಡ್ಡಿದೆ.
ಹೋರಾಟದ ಜ್ವಾಲೆ: ಮೆಕ್ಸಿಕೊ ಅಧ್ಯಕ್ಷ ಕ್ಲೌಡಿಯಾ ಶೀನ್​ಬಾಮ್​ ವಾಸಿಸುವ ಅರಮನೆಯ ಸುತ್ತಲಿನ ಬೇಲಿಗಳನ್ನು ಮುಸುಕು ಧರಿಸಿದ ಪ್ರತಿಭಟನಾಕಾರರ ಒಂದು ಗುಂಪು ಶನಿವಾರ ಕೆಡವಿಹಾಕಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಯುವಕರ ಆಕ್ರೋಶ ಹೆಚ್ಚಿಸಿತು. ಇದರಿಂದ ರ್ಷಣೆಯ ಸ್ಥಿತಿ ಸೃಷ್ಟಿಯಾಯಿತು. ಪ್ರತಿಭಟನೆಯ ವೇಳೆ 120ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಪೈಕಿ 100 ಪೊಲೀಸರಿದ್ದರೆ, 20ಕ್ಕೂ ಅಧಿಕ ಪ್ರತಿಭಟನಾಕಾರರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಭಟನಾನಿರತರ ನೇತೃತ್ವ ವಹಿಸಿದ್ದ 20ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. "ಮೆಕ್ಸಿಕೊದಲ್ಲಿ ಅಪರಾಧ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದರೂ, ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಲವಾಗಿದೆ. ಯಾವುದೇ ತಪು$್ಪ ಮಾಡದ ಅಮಾಯಕ ಜನರನ್ನು ದುಷ್ಕರ್ಮಿಗಳು ಕೊಂದು ಹಾಕುತ್ತಿದ್ದಾರೆ. ಅಪಹರಣದ ಟನೆಗಳು ಕೂಡ ಹೆಚ್ಚುತ್ತಿವೆ, ಮಾದಕದ್ರವ್ಯ ತಯಾರಿಕೆ ಮತ್ತು ಸಾಗಾಣಿಕೆಯ ಜಾಲಗಳು ಹೆಚ್ಚಿವೆ. ಇವು ತಮ್ಮ ಕೃತ್ಯಗಳಿಗಾಗಿ ಜನರನ್ನು ಕೊಲ್ಲುತ್ತಿವೆ. ಇಂಥ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ಕೈ ಕಟ್ಟಿ ಕುಳಿತಿದೆ. ಹಾಗಾಗಿಯೇ ಯುವಕರು ಹೋರಾಟದ ದಾರಿ ತುಳಿಯ ಬೇಕಾಯಿತು' ಎಂದು ಪ್ರತಿಭಟನಾಕಾರರು ವಿವರಿಸಿದ್ದಾರೆ.

ಸಂಟಿತರಾದ ಬಗೆ

ಮೆಕ್ಸಿಕೊ ಹೋರಾಟದ ನೇತೃತ್ವವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ಸಂಟನೆ ಹೊತ್ತಿಲ್ಲ. ನೇಪಾಳದ ಮಾದರಿಯಲ್ಲಿ ಇಲ್ಲೂ ಯುವಕರು ಸಾಮಾಜಿಕ ಮಾಧ್ಯಮಗಳ ಮೂಲಕವೇ ಸಂಟಿತರಾಗಿದ್ದಾರೆ. "ಜನರೇಷನ್​ ಝಡ್​ ಮೆಕ್ಸಿಕೊ' ಎಂದು ಗುರುತಿಸಿಕೊಂಡಿರುವ ಗುಂಪೊಂದು ಪ್ರತಿಭಟನೆಗಳಿಗೆ ಕರೆ ನೀಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಪ್ರಾರಂಭಿಸಿತು. ಇದಕ್ಕೆ ಯುವಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ, ಸರ್ಕಾರದ ವಿರುದ್ಧದ ಪ್ರತಿಭಟನೆ ಹಲವು ನಗರಗಳಿಗೆ ವ್ಯಾಪಿಸಿತು.

ಈ ಸ್ಥಿತಿಗೇನು ಕಾರಣ?

್ಝಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದ್ದು, ಜನರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ್ಝಮಾದಕವಸ್ತು ತಯಾರಿಕೆ ಮತ್ತು ಸಾಗಾಣಿಕೆಯ ಜಾಲ ವ್ಯಾಪಕವಾಗಿ ಹರಡಿಕೊಂಡಿದೆ. ಈ ದುಷ್ಕರ್ಮಿಗಳು ನಾಗರಿಕರ ಮೇಲೆ ಮಾತ್ರವಲ್ಲ ಪೊಲೀಸರ ಮೇಲೂ ದಾಳಿ ನಡೆಸುತ್ತಿದ್ದಾರೆ. ್ಝಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಿರುವುದರಿಂದಲೇ ದುಷ್ಕರ್ಮಿಗಳು, ಡ್ರಗ್ಸ್​ ಗ್ಯಾಂಗಿನವರು ಕಾನೂನಿನ ಭಯವೇ ಇಲ್ಲದೆ ಆರಾಮವಾಗಿ ಓಡಾಡಿಕೊಂಡಿದ್ದಾರೆ. ್ಝಹಲವು ಪ್ರದೇಶಗಳು ಡ್ರಗ್ಸ್​ ಜಾಲದ ಅಡಗುತಾಣವಾಗಿ ಬದಲಾಗಿವೆ.

ನೇಪಾಳದಲ್ಲೂ ನಡೆದಿತ್ತು

ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳ ನಿಷೇಧವನ್ನು ಮತ್ತು ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಇದೇ ವರ್ಷದ ಸೆಪ್ಟೆಂಬರ್​ನಲ್ಲಿ ಯುವಕರು ಭಾರಿ ಪ್ರತಿಭಟನೆ ನಡೆಸಿ, ಸಂಸತ್​ ಭವನಕ್ಕೆ ನುಗ್ಗಲು ಯತ್ನಿಸಿದ್ದರು. ಸರ್ಕಾರ ಪ್ರತಿಭಟನೆಗೆ ಮಣಿಯಿತು. ೇಸ್​ಬುಕ್​, ಇನ್​ಸ್ಟಾಗ್ರಾಮ್​, ವಾಟ್ಸ್​ ಆ್ಯಪ್​, ಯೂಟ್ಯೂಬ್​, ಎಕ್ಸ್​, ರೆಡ್ಡಿಟ್​, ಲಿಂಕ್ಡ್​ ಇನ್​, ಪ್ರಿಂಟ್​ರೆಸ್ಟ್​, ಸಿಗ್ನಲ್​ ಸಹಿತ 26 ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಜಿಂಗ್​ ಆ್ಯಪ್​ಗಳ ಮೇಲಿನ ನಿಷೇಧವನ್ನು ವಾಪಸ್​ ಪಡೆಯಿತಲ್ಲದೆ, ಜನಾಕ್ರೋಶಕ್ಕೆ ಗುರಿಯಾದ ಕೆ.ಪಿ.ಶರ್ಮಾ ಓಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಎರಾಬಿರ್ರಿಯಾಗಿ ಹಲವು ಸುತ್ತು ಗುಂಡು ಹಾರಿಸಿದ ಪರಿಣಾಮ 20 ಯುವಕರು ಮೃತಪಟ್ಟು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ನೇಪಾಳದಲ್ಲಿ ಈಗ ಮಧ್ಯಂತರ ಸರ್ಕಾರ ರಚನೆಯಾಗಿದ್ದು, ಚುನಾವಣೆ ನಡೆಸುವ ಅಥವಾ ನೂತನ ಸರ್ಕಾರ ರಚನೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.

ಅಪರಾಧ ಕೃತ್ಯಗಳು

1. ಮೆಕ್ಸಿಕೊದ ವಾಯವ್ಯದಲ್ಲಿ ರುವ ಗುವಾನಾಜುನಾಟೊ ರಾಜ್ಯವು ಅತ್ಯಂತ ಹಿಂಸಾತ್ಮಕ ರಾಜ್ಯ ಎಂಬ ಕುಖ್ಯಾತಿ ಹೊಂದಿದೆ. ಇಲ್ಲಿ ಹತ್ತಾರು ಉಗ್ರ ಗುಂಪುಗಳು ಸಕ್ರಿಯವಾಗಿವೆ. 2025ರ ಆರಂಭದಿಂದ ಇಲ್ಲಿಯವರೆಗೆ ಇದೊಂದೇ ರಾಜ್ಯದಲ್ಲಿ 1,500ಕ್ಕೂ ಹೆಚ್ಚು ಹತ್ಯೆಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜೂನ್​ 26ರಂದು ಗುವಾನಾಜುನಾಟೊ ರಾಜ್ಯದ ಇರಾಪುವಾಟೊ ನಗರದಲ್ಲಿ ಪಾರ್ಟಿ ವೇಳೆ ನಡೆದ ಗುಂಡಿನ ದಾಳಿಯಲ್ಲಿ 12 ಜನರು ಮೃತಪಟ್ಟು, 20 ಜನರು ಗಾಯಗೊಂಡಿದ್ದರು. ಸೇಂಟ್​ ಜಾನ್​ ಬ್ಯಾಪ್ಟಿಸ್ಟ್​ ಚರ್ಚ್​ ಎದುರಿನ ರಸ್ತೆಯಲ್ಲಿ ನೂರಾರು ಜನರು ನೃತ್ಯ ಮಾಡುತ್ತಿದ್ದಾಗಲೇ ಈ ಟನೆ ಸಂಭವಿಸಿತ್ತು.
2. ಮೇ 10ರಂದು ಮೆಕ್ಸಿಕೊ ನಗರದ ದಣ ಭಾಗದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 8 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.
3. ಮೆಕ್ಸಿಕೊ ಗಡಿಭಾಗಕ್ಕೆ ಹೊಂದಿಕೊಂಡಿ ರುವ ಹುಯಿಟ್ಜಿಲಾಕ್​ ದಟ್ಟ ಅರಣ್ಯ ಪ್ರದೇಶ ಹೊಂದಿದೆ. ಈ ಪ್ರದೇಶವು ಮರಗಳ್ಳರು, ಅಪಹರಣಕಾರರು ಹಾಗೂ ಡ್ರಗ್ಸ್​ ಗ್ಯಾಂಗ್​ನ ಅಡಗುತಾಣ ವಾಗಿದ್ದು, ಇಲ್ಲಿಂದಲೇ ಹಲವು ಅಪರಾಧ ಕೃತ್ಯಗಳಿಗೆ ಸಂಚು ರೂಪಿಸಲಾಗುತ್ತಿದೆ.
4. ಉತ್ತರ ಮೆಕ್ಸಿಕನ್​ ಪಟ್ಟಣವಾದ ಎನ್ಸೆನಾಡಾದಲ್ಲಿ 2023ರ ಮೇ 20ರಂದು ಬೈಕ್​ ರ್ಯಾಲಿಯನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯಲ್ಲಿ 10 ಜನರು ಪ್ರಾಣ ಕಳೆದುಕೊಂಡರು.
5. ಮಾದಕವಸ್ತುಗಳ ಸಾಗಾಟ ಜಾಲ ವ್ಯಾಪಕವಾಗಿ ಹರಡಿಕೊಂಡಿದ್ದು, ಯುವಕರನ್ನು ಡ್ರಗ್ಸ್​ ವ್ಯಸನದ ದಾಸರಾಗಿಸುತ್ತಿದೆ. ಈ ಜಾಲ ಎಷ್ಟು ಅಪಾಯಕಾರಿಯಾಗಿ ಬೆಳೆದಿದೆ ಎಂದರೆ ಪೊಲೀಸ್​ ಪಡೆಗಳ ಮೇಲೆಯೇ ಆಗಾಗ ದಾಳಿಗಳನ್ನು ನಡೆಸುತ್ತದೆ. 2021ರ ಮಾರ್ಚ್​ 19ರಂದು ಪೊಲೀಸರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದ ಡ್ರಗ್ಸ್​ ಗ್ಯಾಂಗ್​ 8 ಪೊಲೀಸರು ಮತ್ತು ಮೂವರು ತನಿಖಾಧಿಕಾರಿಗಳನ್ನು ಹತ್ಯೆ ಮಾಡಿತ್ತು. ಇದಕ್ಕೂ ಮುನ್ನ 2019ರ ಅಕ್ಟೋಬರ್​ನಲ್ಲಿ ಮೈಕೋವಕಾನ್​ನಲ್ಲಿ ಡ್ರಗ್ಸ್​ ಗ್ಯಾಂಗ್​ 14 ಪೊಲೀಸರನ್ನು ಹತ್ಯೆಗೈದಿತ್ತು.

ಅನ್ಯಾಯ ಸಹಿಸಲ್ಲ

ಹಲವು ದೇಶಗಳಲ್ಲಿ ಭ್ರಷ್ಟಾಚಾರ ಹೆಚ್ಚಳ, ನಾಯಕತ್ವ ವಿಲತೆ ವಿರುದ್ಧದ ಹೋರಾಟದಲ್ಲಿ ಜನರೇಶನ್​ ಝೆಡ್​ (1997ರಿಂದ 2012ರವರೆಗೆ ಜನಿಸಿದವರು)ನವರೇ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ, ಈ ಪೀಳಿಗೆಯವರು ಸಾಮಾಜಿಕ ವಿಷಯಗಳಿಗೆ ಸ್ಪಂದಿಸುವುದಿಲ್ಲ, ತಮ್ಮದೇ ಆದ ಲೋಕದಲ್ಲಿ ಮಗ್ನರಾಗಿರುತ್ತಾರೆ ಎಂಬ ಆಕ್ಷೇಪವಿದೆ. ಆದರೆ, ನೇಪಾಳ ಮತ್ತು ಮೆಕ್ಸಿಕೋದ ಟನೆ ಈ ಅಪವಾದವನ್ನು ಸುಳ್ಳಾಗಿಸಿದೆ. 18ರಿಂದ 28 ವರ್ಷದೊಳಗಿನವರು ಸರ್ಕಾರದ ವಿರುದ್ಧ ಬಹಿರಂಗವಾಗಿ ದನಿ ಎತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ$್ಯದ ರಕ್ಷಣೆಗೆ ಮುಂದಾಗಿದ್ದಾರೆ. ಮಾತ್ರವಲ್ಲ, ಮೆಕ್ಸಿಕೋದ ಈ ಟನೆ ಇತರ ದೇಶದ ಜೆನ್​ ಝೆಡ್​ ಪೀಳಿಗೆಯನ್ನೂ ಪ್ರಭಾವಿಸಲಿದೆ ಎನ್ನುತ್ತಾರೆ ತಜ್ಞರು.

ಹೀಗಿದೆ ಮೆಕ್ಸಿಕೊ

ಮೆಕ್ಸಿಕೊದ ಉತ್ತರಕ್ಕೆ ಅಮೆರಿಕ, ದಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೊ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್​ ಮತ್ತು ಕೆರಿಬ್ಬಿಯನ್​ ಸಮುದ್ರಗಳಿವೆ. ಮೆಕ್ಸಿಕೊ ನಗರವು ವಿಶ್ವದಲ್ಲಿ ಅತ್ಯಧಿ-ಕ ಜನಸಂಖ್ಯೆ ಹೊಂದಿರುವ 10 ನಗರಗಳಲ್ಲಿ ಒಂದಾಗಿದೆ (12 ಕೋಟಿ). ಸುಮಾರು 20 ಲ ಚ.ಕಿ.ಮೀ. ವಿಸ್ತಾರವಾಗಿರುವ ಇದು ಅಮೆರಿಕ ಖಂಡಗಳಲ್ಲಿ 5ನೇ ದೊಡ್ಡ ದೇಶ ಮತ್ತು ವಿಶ್ವದಲ್ಲಿ 14ನೇಯದು. ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಪಾನಿಷ್​ ಭಾಷಿಕರು ನೆಲೆಸಿರುವ ದೇಶ ಮೆಕ್ಸಿಕೊ. ಅಲ್ಲದೆ, ಬೆಳ್ಳಿಯ ಕರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಿದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net