ನಾಳೆ 8000 ಉದ್ಯೋಗಿಗಳಿಗೆ ಮೆಟಾ ಗೇಟ್​ಪಾಸ್​! ಲೇಆಫ್​ ಪ್ರಕ್ರಿಯೆ ಬದಲು ಎಐ ರೋಲ್​ಗೆ ಶಿಫ್ಟ್​ ಪ್ಲ್ಯಾನ್​

ಮೆಟಾ ಲೇಆಫ್​ ಪ್ರಕ್ರಿಯೆ
ಮೆಟಾ ಲೇಆಫ್​ ಪ್ರಕ್ರಿಯೆ
Published on

ಪ್ರಮುಖ ಮುಖ್ಯಾಂಶಗಳು

  • ಸುಮಾರು 8 ಸಾವಿರ ಉದ್ಯೋಗಿಗಳಿಗೆ ನಾಳೆ ಗೇಟ್​ಪಾಸ್​ ಕೊಡಲು ನಿರ್ಧಾರ
  • ಈ ಮಧ್ಯೆ ಎಐ ರೋಲ್​ಗೆ ಬಹುತೇಕ ಮಂದಿಯ ಶಿಫ್ಟ್​ಗೆ ಪ್ಲ್ಯಾನ್​
  • ಮೆಟಾ ಸಂಸ್ಥೆಯ ವಜಾ ಪ್ರಕ್ರಿಯೆ ಕೂಡ ಎಐ ಮೇಲೆ ನಿರ್ಧರಿತ
Meta Layoffs: ನಾಳೆ (ಮೇ.20) ಶೇ.10ರಷ್ಟು ತನ್ನ ಜಾಗತಿಕ ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾಗೊಳಿಸಲು ಟೆಕ್​ ದಿಗ್ಗಜ ಮೆಟಾ ಸಂಸ್ಥೆ ನಿರ್ಧರಿಸಿದೆ. ಈ ಮಧ್ಯೆ, ಸುಮಾರು 8000 ಮಂದಿಯನ್ನು ಕಿತ್ತುಬಿಸಾಡುವ ಬದಲು ಹೊಸ ಮಾರ್ಗವನ್ನು ಕಂಪನಿಯ ಓನರ್​ ಮಾರ್ಕ್​ ಝುಕರ್​ಬರ್ಗ್​ ಪ್ಲ್ಯಾನ್​ ಮಾಡಿರುವುದಾಗಿ ವರದಿಯಾಗಿದೆ.
ಈ ಮೊದಲೇ ಮೇ ಎರಡನೇ ವಾರದಲ್ಲಿ ಲೇಆಫ್​ ಮಾಡುವುದಾಗಿ ಸಂಸ್ಥೆ ಮೆಮೋ ಹೊರಡಿಸಿತ್ತು. ಜಾಗತಿಕವಾಗಿ ಕೆಲಸ ಮಾಡುತ್ತಿರುವ ಶೇ.10ರಷ್ಟು ಉದ್ಯೋಗಿಗಳನ್ನು ಈಗಿರುವ ಹುದ್ದೆಯಿಂದ ವಜಾಗೊಳಿಸಲು ಝುಕರ್​ಬರ್ಗ್​ ನಿರ್ಧರಿಸಿದ್ದರು. ಆದ್ರೆ, ಈಗ 7000 ಮಂದಿಯನ್ನು ಕೆಲಸದಿಂದ ಹೊರ ನೂಕುವ ಬದಲಿಗೆ ಅವರನ್ನು ಎಐ ರೋಲ್​ಗಳಿಗೆ ವರ್ಗಾಯಿಸುವುದು ಉತ್ತಮ ಎಂದು ಚಿಂತಿಸಿದೆ.
ಎಐ ಮೇಲೆ ಹೆಚ್ಚು ಅವಲಂಬಿತವಾಗಿರುವ ಮೆಟಾ, 8 ಸಾವಿರ ಉದ್ಯೋಗಿಗಳ ಪೈಕಿ 7000 ಮಂದಿಯನ್ನು ಹೊಸ ಎಐ ರೋಲ್​ಗಳಿಗೆ ಹಾಕುವ ಮೂಲಕ ಆಧುನಿಕ ಟೆಕ್ನಾಲಜಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗಲಿ ಎಂದು ನಿರ್ಧರಿಸಿದೆ. ಅದರಲ್ಲೂ, ಮ್ಯಾನೇಜರ್​ ರೋಲ್​ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಒಟ್ಟಾರೆಯಾಗಿ, ವಜಾಗೊಳಿಸುವಿಕೆ ಮತ್ತು ವರ್ಗಾವಣೆಗಳು ಸಂಸ್ಥೆಯ ಶೇ20ರಷ್ಟು ಉದ್ಯೋಗಿಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೆಲವು ವರ್ಗಾವಣೆಗಳು ಈಗಾಗಲೇ ಮುಗಿದಿದ್ದು, ಉತ್ತರ ಅಮೆರಿಕಾದಲ್ಲಿನ ಉದ್ಯೋಗಿಗಳಿಗೆ ಮೇ.20 ರವರೆಗೆ ವರ್ಕ್​ಫ್ರಮ್​ ಹೋಮ್ ಮಾಡುವಂತೆ ಸಂಸ್ಥೆ ಮೇಲ್​ ಮುಖಾಂತರ ತಿಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net