ಈ ಕಾರಣದಿಂದಲೇ ಟೀಮ್​ ಇಂಡಿಯಾ ಬೃಹತ್​ ಮೊತ್ತ ಗಳಿಸಿತು; ಮೊದಲ ಇನ್ನಿಂಗ್ಸ್​​ನ ಅಸಲಿ ಕಥೆ ಬಿಚ್ಚಿಟ್ಟ ಹೆನ್ರಿ | Matt Henry

Matt Henry
Matt Henry
Published on
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 255 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿದೆ.
ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್, ಅಭಿಷೇಕ್​​ ಶರ್ಮಾ ಮತ್ತು ಇಶಾನ್​ ಕಿಶನ್​ ಅವರ ಅದ್ಭುತ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮೊತ್ತವನ್ನು ಕಲೆಹಾಕಿ ಇತಿಹಾಸ ಬರೆದಿದೆ.
ಮೊದಲ ಇನ್ನಿಂಗ್ಸ್​ ಬಳಿಕ ಮಾತನಾಡಿದ ಕಿವೀಸ್​ ಬೌಲರ್​ ಮ್ಯಾಟ್​​ ಹೆನ್ರಿ, ಹೌದು, ಇದು ಕಠಿಣ ಗುರಿ. ನಾವು ಅವರನ್ನು 240ರ ಒಳಗೆ ಕಟ್ಟಿಹಾಕಲು ಯೋಜಿಸಿದ್ದೆವು. ಆದರೆ ಭಾರತದ ಬ್ಯಾಟರ್‌ಗಳು ವಿಕೆಟ್ ಅನ್ನು ಚೆನ್ನಾಗಿ ಅರ್ಥಮಾಡಿಕೊಂಡು ಆಡಿದರು, ಪಿಚ್ ನಮಗೆ ಅರ್ಥವಾಗುವ ಮುನ್ನವೇ ಅವರಿಗೆ ಅರ್ಥವಾಗಿತ್ತು, ಆದ್ದರಿಂದಲೇ ಬೃಹತ್​ ಮೊತ್ತ ಗಳಿಸಿದರು. ನಮ್ಮ ತಂಡದಲ್ಲೂ ಶಕ್ತಿಶಾಲಿ ಬ್ಯಾಟರ್‌ಗಳಿದ್ದು, ಈ ಗುರಿಯನ್ನು ಬೆನ್ನಟ್ಟುವ ನಂಬಿಕೆ ಇದೆ ಎಂದರು.

ಕೊಹ್ಲಿ ದಾಖಲೆ ಮುರಿದ ಚೇಟ್ಟಾ

ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 89 ರನ್ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶಾಹಿದ್ ಅಫ್ರಿದಿ ನಂತರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ 50ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net