ರಷ್ಯಾ-ಚೀನಾ ಸಹಭಾಗಿತ್ವದ ಅಮುರ್ ಪ್ರದೇಶದ ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ ಭಾರಿ ಸ್ಫೋಟ; ಏಳು ಸಾವು | explosion

ಘಟನೆಯ ಸ್ಥಳ
ಘಟನೆಯ ಸ್ಥಳ
Published on
Explosion: ರಷ್ಯಾದ ದೂರದ ಪೂರ್ವದ ಅಮುರ್ ಪ್ರದೇಶದಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್​​ನಲ್ಲಿ ಮಂಗಳವಾರ(ಆ. 25) ಸ್ಪೋಟ ಸಂಭವಿಸಿ, ಬೆಂಕಿ ಹಾವರಿಸಿದ್ದು, ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಾಯಿಟರ್ಸ್ ವರದಿ ಪ್ರಕಾರ, ಆರು ಚೀನೀ ಪ್ರಜೆಗಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಒಂಬತ್ತು ಜನರು ಕಾಣೆಯಾಗಿದ್ದಾರೆ. 36 ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವುದು ಸೇರಿದಂತೆ ಇನ್ನೂ 152 ಜನರಿಗೆ ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ದೊಡ್ಡ ಕೈಗಾರಿಕಾ ಸ್ಥಾವರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸುತ್ತಿವೆ. ಬೃಹತ್ ಜ್ವಾಲೆಗಳು ಹೊರ ಬರುತ್ತಿರುವುದು ಕಂಡು ಬಂದಿದೆ. ಸ್ಥಾವರದ ಹಲವಾರು ಭಾಗಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ.

ಅಮುರ್ ಜಂಟಿ ರಷ್ಯಾ-ಚೀನಾ ಯೋಜನೆ

ಅಮುರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ ಯೋಜನೆಯೂ ರಷ್ಯಾದ ಪೆಟ್ರೋಕೆಮಿಕಲ್ ಕಂಪನಿ ಸಿಬರ್ ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ದೈತ್ಯ ಸಿನೊಪೆಕ್ ನಡುವಿನ ಜಂಟಿ ಉದ್ಯಮವಾಗಿದೆ. ನಿರ್ಮಾಣದ ಉತ್ತುಂಗದಲ್ಲಿ, ಸುಮಾರು 30,000 ಬಿಲ್ಡರ್‌ಗಳು ಈ ಯೋಜನೆಯಲ್ಲಿ ಭಾಗಿಯಾಗಿದ್ದರು ಎಂದು ವೆಬ್‌ಸೈಟ್ ತಿಳಿಸಿದೆ.
ರಷ್ಯಾದ ಅಮುರ್ ಪ್ರದೇಶದ ಸ್ವೊಬೊಡ್ನಿ ಪಟ್ಟಣದ ಬಳಿ ಇದನ್ನೂ ನಿರ್ಮಿಸಲಾಗುತ್ತಿದೆ. ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ ತಯಾರಿಸಲು ವಿಶ್ವದ ಅತಿದೊಡ್ಡ ಸೌಲಭ್ಯಗಳಲ್ಲಿ ಒಂದಾಗಲು ವಿನ್ಯಾಸಗೊಳಿಸಲಾದ ಇದು ಸುಮಾರು $10 ಬಿಲಿಯನ್ ಯೋಜನೆಯಾಗಿದೆ. ಈ ಸಂಕೀರ್ಣವು ಹತ್ತಿರದ ಅಮುರ್ ಅನಿಲ ಸಂಸ್ಕರಣಾ ಘಟಕದಿಂದ ಕಚ್ಚಾ ವಸ್ತುಗಳನ್ನು ಸಂಸ್ಕರಿಸಿ ಪ್ಲಾಸ್ಟಿಕ್ ತಯಾರಿಸುವ ವಸ್ತುಗಳಾಗಿ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net