ದೆಹಲಿಯಲ್ಲಿ ಮಾರ್ಕೊ ರುಬಿಯೊ ಪ್ರೀ -ಬರ್ತ್‌ಡೇ ಸೆಲಬ್ರೇಷನ್​; 'ವಿಲೇಜ್ ಪೀಪಲ್' ಬ್ಯಾಂಡ್‌ನಿಂದ ವಿಶೇಷ ಗಾಯನ!..Marco Rubio

Marco Rubio In Delhi
Marco Rubio In Delhi
Published on

ಪ್ರಮುಖ ಮುಖ್ಯಾಂಶಗಳು

  • ಮೇ 28 ರಂದು 55ನೇ ವರ್ಷಕ್ಕೆ ಕಾಲಿಡಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ
  • ಅಮೆರಿಕನ್ ಡಿಸ್ಕೋ ಬ್ಯಾಂಡ್ 'ವಿಲೇಜ್ ಪೀಪಲ್' ತಂಡದಿಂದ ಹ್ಯಾಪಿ ಬರ್ತಡೇ ಹಾಡು ಸೆಲಬ್ರೇಷನ್
  • ನವದೆಹಲಿಯಲ್ಲಿ ಮುಂಚಿತವಾಗಿ ಮಾರ್ಕೊ ರುಬಿಯೊ ಹುಟ್ಟು ಹಬ್ಬ ಆಚರಣೆ
ನವ ದೆಹಲಿ:
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ದೆಹಲಿಯ ಭಾರತ್​ ಮಂಟಪದಲ್ಲಿ ಅಡ್ವಾನ್ಸ್​​​ ಆಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಮೇ 28 ರಂದು 55ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ ಅವರಿಗೆ ಸರ್ಪ್ರೈಸ್​ ನೀಡುವ ಸಲುವಾಗಿ ಮೂರು ದಿನಗಳ ಮುನ್ನವೇ ಅದ್ದೂರಿಯಾಗಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಹೇಗಿತ್ತು ಬರ್ತಡೇ ಸೆಲಬ್ರೇಷನ್​
ಭಾರತದ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ರುಬಿಯೋ ಅವರನ್ನು ವೇದಿಕೆ ಆಹ್ವಾನಿಸಿದರು. ವೇದಿಕೆ ಬರುತ್ತಿದ್ದಂತೆ ಜನ್ಮದಿನದ ಶುಭಾಶಯಗಳು ಮಾರ್ಕೊ ರೂಬಿಯೊ ಎಂಬ ಸಂದೇಶವಿರುವ ದೈತ್ಯ ಪರದೆಯು ಬೆಳಗುತ್ತಿರುವುದು ಕಂಡುಬಂದಿತು. ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಜಿಯೊ ಗೋರ್ ಅವರು ಮಾರ್ಕೊ ರುಬಿಯೊ ಅವರನ್ನು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ವೇದಿಕೆಯ ಮೇಲೆ ತರಲಾದ ಭವ್ಯವಾದ ನಾಲ್ಕು ಹಂತದ ಕೇಕ್ ಅನ್ನು ಕತ್ತರಿಸಿ ರುಬಿಯೊ ಸಂಭ್ರಮಿಸಿದರು.. 1970ರ ದಶಕದ ಪ್ರಸಿದ್ಧ ಅಮೆರಿಕನ್ ಡಿಸ್ಕೋ ಮತ್ತು ಪಾಪ್ ಬ್ಯಾಂಡ್ ಆದ 'ವಿಲೇಜ್ ಪೀಪಲ್' ಅನ್ನು ರುಬಿಯೊ ಅವರಿಗಾಗಿ ವಿಶೇಷವಾಗಿ ಜನ್ಮದಿನದ ಗೀತೆಯನ್ನು ಹಾಡಿತು. ಅಷ್ಟೇ ಅಲ್ಲದೆ, ನೆರೆದಿದ್ದ ಗಣ್ಯರು ಮತ್ತು ಸಾರ್ವಜನಿಕರು ಬ್ಯಾಂಡ್‌ನ ಪ್ರಸಿದ್ಧ "Y.M.C.A." ಹಾಡಿನ ಧಾಟಿಗೆ ತಕ್ಕಂತೆ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.

ಯಾರೆಲ್ಲ ಭಾಗಿಯಾಗಿದ್ದರು?

ಈ ಉನ್ನತ ಮಟ್ಟದ ರಾಜತಾಂತ್ರಿಕ ಕಾರ್ಯಕ್ರಮದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಗಂಭೀರ ರಾಜತಾಂತ್ರಿಕ ಚರ್ಚೆಗಳ ನಡುವೆ ಮಾರ್ಕೊ ರುಬಿಯೊ ಅವರ ಈ ಜನ್ಮದಿನದ ಆಚರಣೆಯನ್ನು ಮಾಡಲಾಯಿತು.

ಏನಿದು 'ವಿಲೇಜ್ ಪೀಪಲ್' ಹಾಡು?

ಅಕ್ಟೋಬರ್ 1978 ರಲ್ಲಿ ಬಿಡುಗಡೆಯಾದ 'ವಿಲೇಜ್ ಪೀಪಲ್' ಹಾಡು YMCA, LGBTQ ಸಮುದಾಯದ ಗೀತೆಯಾಗಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರಿಗೆ ಇಷ್ಟವಾದ ಹಾಡು. ಅಮೆರಿಕದ ಹಲವಾರು ಕಾರ್ಯಕ್ರಮಗಳಲ್ಲಿ ಅದರ ಬೀಟ್‌ಗಳಿಗೆ ನೃತ್ಯ ಮಾಡುವುದನ್ನು ನೋಡಬಹುದು.
ವಿಲೇಜ್ ಪೀಪಲ್ ಅನ್ನು ಮೂಲತಃ ಫ್ರೆಂಚ್ ನಿರ್ಮಾಪಕರಾದ ಜಾಕ್ವೆಸ್ ಮೊರಾಲಿ ಮತ್ತು ಹೆನ್ರಿ ಬೆಲೊಲೊ ಮತ್ತು ಪ್ರಮುಖ ಗಾಯಕ ವಿಕ್ಟರ್ ವಿಲ್ಲೀಸ್ ರಚಿಸಿದರು. ವಿಶ್ವದ ಅತ್ಯಂತ ಪ್ರಸಿದ್ಧ ಡಿಸ್ಕೋ ಸಂಗೀತ ಗುಂಪುಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ಈ ಬ್ಯಾಂಡ್, ಸ್ಯಾನ್ ಫ್ರಾನ್ಸಿಸ್ಕೊ/ಇನ್ ಹಾಲಿವುಡ್, ಮ್ಯಾಕೊ ಮ್ಯಾನ್, ವೈಎಂಸಿಎ, ಇನ್ ದಿ ನೇವಿ ಮತ್ತು ಗೋ ವೆಸ್ಟ್ ಸೇರಿದಂತೆ ಹಲವಾರು ಹಿಟ್‌ಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರವಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net