273 ಸೆಲೆಬ್ರಿಟಿಗಳ ಆಟೋಗ್ರಾಫ್​​​ನ್ನು ಬೆನ್ನಿನ ಮೇಲೆ ಟ್ಯಾಟೂ ಹಾಕಿ ವಿಶ್ವ ದಾಖಲೆ ಬರೆದ ವ್ಯಕ್ತಿ! GUINNESS WORLD RECORD

GUINNESS WORLD RECORD
GUINNESS WORLD RECORD
Published on
ನ್ಯೂಯಾರ್ಕ್:  ( Guinness World Record) ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಭೇಟಿಯಾದಾಗ ಫೋಟೋ ತೆಗೆದುಕೊಳ್ಳುತ್ತಾರೆ ಅಥವಾ ಆಟೋಗ್ರಾಫ್ (ಸಹಿ) ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಆಟೋಗ್ರಾಫ್ ಅನ್ನು ತನ್ನ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಅಮೆರಿಕದ ಫ್ಲೋರಿಡಾದ ನಿವಾಸಿಯಾದ ಫಂಕಿ ಮಟಾಸ್ (Funky Matas) ತಮ್ಮ ಬೆನ್ನಿನ ಮೇಲೆ ಬರೋಬ್ಬರಿ 273 ಪ್ರಸಿದ್ಧ ವ್ಯಕ್ತಿಗಳ ಹಸ್ತಾಕ್ಷರಗಳನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಇವರು "ದೇಹದ ಮೇಲೆ ಅತಿ ಹೆಚ್ಚು ಆಟೋಗ್ರಾಫ್ ಟ್ಯಾಟೂ ಹೊಂದಿರುವ ವ್ಯಕ್ತಿ" ಎಂಬ ಗಿನ್ನೆಸ್ ವಿಶ್ವ ದಾಖಲೆಗೆ (Guinness World Record) ಪಾತ್ರರಾಗಿದ್ದಾರೆ.
ಮೊದಲು ಸೆಲೆಬ್ರಿಟಿಗಳ ಬಳಿ ಹೋಗಿ ಬೆನ್ನಿನ ಮೇಲೆ ಮಾರ್ಕರ್ ಮೂಲಕ ಸಹಿ ಮಾಡುತ್ತಾನೆ. ನಂತರ ಅದನ್ನು  ಟ್ಯಾಟೂ ಹಾಕಿಸಿಕೊಳ್ಳುತ್ತಾನೆ.  ಹೀಗೆ ಬೆನ್ನಿನ ಮೇಲೆ ವಿಲ್ ಸ್ಮಿತ್, ಕ್ರಿಸ್ ರಾಕ್, ಜೆರಾರ್ಡ್ ಬಟ್ಲರ್ ಮತ್ತು ಸ್ಟಾನ್ ಲೀಯಂತಹ ಜಗತ್ಪ್ರಸಿದ್ಧ ನಟರು, ಕ್ರೀಡಾಪಟುಗಳು ಮತ್ತು ಸಂಗೀತಗಾರರ ಸಹಿಗಳಿವೆ. ಪ್ರತಿಯೊಬ್ಬ ಗಣ್ಯ ವ್ಯಕ್ತಿಯನ್ನು ಭೇಟಿಯಾಗಿ ಅವರ ಸಮ್ಮತಿ ಪಡೆದು ಈ ಕಾರ್ಯ ಪೂರ್ಣಗೊಳಿಸಿದ್ದಾರೆ.
ಆರಂಭದಲ್ಲಿ ಮನೆಯವರು ಮತ್ತು ಸ್ನೇಹಿತರು ಮ್ಯಾಟ್ ಅವರ ಈ ನಿರ್ಧಾರವನ್ನು ವಿರೋಧಿಸಿದ್ದರು. ಮ್ಯಾಟ್ ತಮ್ಮ ಹಠ ಬಿಡದೆ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net