ಇಂಡೋನೇಷ್ಯಾ: ( snake) ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ಎಂಥವರನ್ನೂ ಬೆಚ್ಚಿಬೀಳಿಸುತ್ತವೆ. ಅಂತಹದ್ದೇ ಒಂದು ವಿಲಕ್ಷಣ ಹಾಗೂ ಅಪಾಯಕಾರಿ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ಜೀವಂತ ಹಾವನ್ನು ತನ್ನ ಮೂಗಿನೊಳಗೆ ಬಿಟ್ಟು ಬಾಯಿಯ ಮೂಲಕ ಹೊರತೆಗೆದಿದ್ದಾನೆ.
ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊದಲ್ಲಿ, ಮೈಕ್ ಹೋಲ್‌ಸ್ಟನ್ ಜೀವಂತ ಹಾವನ್ನು ತನ್ನ ಮೂಗಿನ ಹೊಳ್ಳೆಯೊಳಗೆ ಹಾಕುತ್ತಾನೆ. ಅಚ್ಚರಿಯೆಂದರೆ, ಕೆಲವೇ ಕ್ಷಣಗಳಲ್ಲಿ ಆ ಹಾವಿನ ತಲೆಯು ವ್ಯಕ್ತಿಯ ಬಾಯಿಯ ಮೂಲಕ ಹೊರಬರುತ್ತದೆ.
ಅತ್ಯಂತ ಲೀಲಾಜಾಲವಾಗಿ ಆತ ಹಾವನ್ನು ಬಾಯಿಯಿಂದ ಎಳೆದು ಹೊರತೆಗೆಯುತ್ತಾನೆ. ಈ ಅಪಾಯಕಾರಿ ಸಾಹಸ ಮಾಡಿದ ನಂತರ, ಮೈಕ್ ಕ್ಯಾಮೆರಾವನ್ನು ನೋಡಿ ನಗುತ್ತಾನೆ,
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವೀಡಿಯೊವನ್ನು ಇಲ್ಲಿಯವರೆಗೆ 5.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನೆಟಿಜನ್‌ಗಳು ಇದರ ಬಗ್ಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹಾವು ಅವನ ಗಂಟಲಿನ ಕೆಳಗೆ ಜಾರಿದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ" ಎಂದು ಬರೆದಿದ್ದಾರೆ.
ಮೈಕ್ ಹೋಲ್ಸ್ಟನ್ ಫ್ಲೋರಿಡಾ ಮೂಲದ ಝೂಲಾಜಿಕಲ್ ವೈಲ್ಡ್‌ಲೈಫ್ ಫೌಂಡೇಶನ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಅಳಿವಿನಂಚಿನಲ್ಲಿರುವ ಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ಪ್ರಪಂಚವನ್ನು ಸುತ್ತುತ್ತಾರೆ.