ಷಿಕಾಗೋದಲ್ಲಿ ಒಂದು ಹೊತ್ತಿನ ಭಾರತೀಯ ಊಟಕ್ಕೆ 40 ಸಾವಿರ ರೂ.! ವಿಡಿಯೋ ಇಲ್ಲಿದೆ

Restaurant
Restaurant
Published on
ನವದೆಹಲಿ: (Restaurant )ವಿಶ್ವಾದ್ಯಂತ ಭಾರತೀಯ ಆಹಾರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ ಷಿಕಾಗೋದಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಒಬ್ಬ ವ್ಯಕ್ತಿ ಮದ್ಯಾಹ್ನ ಹೊತ್ತಿನ ಒಂದು ಹೊತ್ತಿನ ಊಟಕ್ಕಾಗಿ 40,000 ರೂ. ಖರ್ಚು ಮಾಡಿದ್ದಾರೆ. ಭಾರತೀಯ ರೆಸ್ಟೋರೆಂಟ್‌ನ ಬಗ್ಗೆ ಭಾರತೀಯ ಭೋಜನಕಾರನೊಬ್ಬ ( food blogger) ಮಾಡಿದ ಪ್ರಾಮಾಣಿಕ ವಿಮರ್ಶೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ಅಮೆರಿಕದ ಚಿಕಾಗೋದಲ್ಲಿರುವ ಪ್ರಸಿದ್ಧ ಮೈಕೆಲಿನ್ ( Michelin-starred Indian restaurant) ಎನ್ನುವ ಭಾರತೀಯ ರೆಸ್ಟೋರೆಂಟ್ ಅನುಭವದ ಕುರಿತು ಪೋಸ್ಟ್ ಮಾಡಿದ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಆಧುನಿಕ ರೂಪದಲ್ಲಿ ಭಾರತೀಯ ರುಚಿಗಳನ್ನು ಪರಿಚಯಿಸುವ ಈ ರೆಸ್ಟೋರೆಂಟ್ ಈಗ ಅನೇಕರ ಚರ್ಚೆಯಾಗಿದ್ದು ದುಬಾರಿ ಬೆಲೆಯ ಊಟದಿಂದಾಗಿದೆ.
ಅನುಷ್ಕ್ ಶರ್ಮಾ ಎಂಬ ಭಾರತೀಯ ಮೂಲದ ಯುವಕ ಷಿಕಾಗೋದ ಮೈಕೆಲಿನ್-ಸ್ಟಾರ್ಡ್ ರೆಸ್ಟೋರೆಂಟ್ 'ಇಂಡಿಯೆನ್' ನಲ್ಲಿ ಸುಮಾರು 40,000 ಮೌಲ್ಯದ ಸಸ್ಯಾಹಾರಿ ಮೆನುವನ್ನು ರುಚಿ ನೋಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯನ್ನು ಆಧುನಿಕ ರೀತಿಯಲ್ಲಿ ವಿಶ್ವ ದರ್ಜೆಗೆ ಕೊಂಡೊಯ್ಯುವ ಈ ರೆಸ್ಟೋರೆಂಟ್ ಆಹಾರ ಪ್ರಿಯರಲ್ಲಿ ವಿಶೇಷ ಸ್ಥಾನವನ್ನುಗಳಿಸಿದೆ. ಷಿಕಾಗೋದ ಇಂಡಿಯೆನ್‌ನಲ್ಲಿ ಸುಮಾರು 40000 ರೂ. ಮೌಲ್ಯದ ಊಟವನ್ನು (ಇಬ್ಬರಿಗೆ) ಸೇವಿಸಿದ್ದಾರೆ.
ವಿಶೇಷ ಮೆನುವಿನಲ್ಲಿ ಧೋಕ್ಲಾ, ಮಶ್ರೂಮ್ ಕಲೆಟಿ ಎಂದರೆ ಮಶ್ರೂಮ್ (ಅಣಬೆ) ಬಳಸಿ ಮಾಡುವ ಒಂದು ಅಡುಗೆ, ಹೂವಿನಂತಹ ಧೋಕ್ಲಾ ಮತ್ತು ಮೃದುವಾದ ಮೇಡು ವಡಾ (Medu Vada) ದಕ್ಷಿಣ ಭಾರತದ ಜನಪ್ರಿಯ ತಿಂಡಿ. ವಡಾ, ಪನೀರ್ ಕೋಫ್ತಾ (Paneer Kofta) ಎಂದರೆ ತುರಿದ ಪನೀರ್, ಆಲೂಗಡ್ಡೆ ಮತ್ತು ಮಸಾಲೆಗಳನ್ನು ಸೇರಿಸಿ ಮಾಡಿದ ಸಣ್ಣ ಉಂಡೆ ಮತ್ತು ಮೊಸರು ಚಾಟ್ ಸೇರಿದಂತೆ ವಿವಿಧ ಸಸ್ಯಾಹಾರಿ ಭಕ್ಷ್ಯಗಳು ಇದ್ದವು.
ಈ ಉತ್ತಮ ಗುಣಮಟ್ಟದ ಆಹಾರ ಮತ್ತು ಸುಂದರವಾದ ಹಂಚಿಕೆ ಅನುಭವದಿಂದಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಈ ರೆಸ್ಟೋರೆಂಟ್ ಉತ್ತಮ ಸ್ಥಳವಾಗಿದೆ. ಆಹಾರವು ಹಸಿವನ್ನು ನೀಗಿಸುವ ಸಾಧನವಲ್ಲ; ಇದು ಒಂದು ದೇಶದ ಸಂಸ್ಕೃತಿ, ಸಂಪ್ರದಾಯ, ಭಾವನೆ ಮತ್ತು ಜೀವನಶೈಲಿಯನ್ನು ಸಹ ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದರು.
ಭಾರತೀಯ ಆಹಾರವು ವಿಶ್ವದ ಅತ್ಯಂತ ಸೊಗಸಾದ ಪಾಕಶಾಲೆಯ ಸಂಸ್ಕೃತಿಗಳಲ್ಲಿ ಒಂದಾಗಿದೆ. ಹೀಗಾಗಿ, ಭಾರತೀಯ ಆಹಾರವು ಅದರ ರುಚಿಗೆ ಮಾತ್ರ ಮೌಲ್ಯಯುತವಾಗಿಲ್ಲ, ಆದರೆ ಸಂಪ್ರದಾಯ ಮತ್ತು ಭಾವನಾತ್ಮಕ ಮೌಲ್ಯವನ್ನೊಳಗೊಂಡಿದೆ ಎನ್ನುವುದು ವಿದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಈ ರೆಸ್ಟೋರೆಂಟ್ ವಿಡಿಯೋ ಉತ್ತಮ ಉದಾಹರಣೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net